ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಬೆಲೆ ಭಾರೀ ಇಳಿಕೆ!

ಸೋಮವಾರ, 13 ಮಾರ್ಚ್ 2023 (13:17 IST)
ಕೋಲ್ಕತ್ತಾ : ಕೋವಿಡ್ 19 ನಂತರ ಏರಿಕೆಯಾಗಿದ್ದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ದರ ಮೊದಲ ಬಾರಿಗೆ ಭಾರೀ ಇಳಿಕೆಯಾಗುತ್ತಿದೆ. 2020ರ ಬಳಿಕ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಶೇ.5-15 ರಷ್ಟು ಇಳಿಕೆಯಾಗಿದೆ. ಖ್ಯಾತ ಕಂಪನಿಗಳಾದ ಎಲ್ಜಿ, ಸ್ಯಾಮ್ಸಂಗ್ ಸೇರದಿಂತೆ ಇನ್ನಿತರ ಕಂಪನಿಗಳ ಎಂಟ್ರಿ ಲೆವೆಲ್ ಫ್ರಿಡ್ಜ್ ಬೆಲೆ 4 ಸಾವಿರ ರೂ. ಇಳಿಕೆಯಾಗಿದೆ.
 
1 ಲಕ್ಷ ರೂ. ಬೆಲೆ ಇರುವ ಫ್ರಿಡ್ಜ್ ದರ 7 ಸಾವಿರದಿಂದ 15 ಸಾವಿರ ರೂ.ವರೆಗೆ ಇಳಿಕೆಯಾಗಿದೆ. ಸ್ಮಾರ್ಟ್ಫೋನ್ ಬೆಲೆಗಳು ಶೇ.15ರಷ್ಟು ಇಳಿಕೆಯಾಗಿದೆ. 2020, 2021ರ ಅವಧಿಯಲ್ಲಿ ಫೋನ್ಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಫೋನ್ ಉತ್ಪಾದನೆಯಾಗಿತ್ತು. ಈಗ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ದಾಸ್ತಾನಿನಲ್ಲಿರುವ ಫೋನ್ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಕಂಪನಿಗಳು ದರವನ್ನು ಇಳಿಕೆ ಮಾಡಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ