ಚಂಡೀಗಢ : ಪಂಜಾಬ್ನಲ್ಲಿ ಕೊರೊನಾ ಹೆಚ್ಚುತ್ತಿದ್ದ ಹಿನ್ನೆಲೆ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಪರಿಶೀಲನಾ ಸಭೆಯಲ್ಲಿ ಹೊಸ ಆದೇಶಗಳನ್ನು ಘೋಷಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗುವುದು ಮತ್ತು ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲು ರಾತ್ರಿ ಕರ್ಫ್ಯೂ ವಿಧಿಸಲಾಗುತ್ತದೆ.
ಪಂಜಾಬ್ನಲ್ಲಿ ದಿನೇ ದಿನೇ ಕೊರೊನಾ ಸೋಂಕು ಹರಡುವಿಕೆ ವೇಗವಾಗಿ ಹೆಚ್ಚುತ್ತಿದೆ. ರಾಜ್ಯದಲ್ಲಿ ಡಿಸೆಂಬರ್ 28 ರಂದು 51 ಕೇಸ್ಗಳು ದಾಖಲಾಗಿದ್ದು, ನಿನ್ನೆ ಒಮ್ಮಿಂದೊಮ್ಮೆಲೆ 419 ಪ್ರಕರಣಗಳು ವರದಿಯಾಗಿದೆ.
ಹರಡುವಿಕೆಯ ದರವು ಡಿಸೆಂಬರ್ 29ರಂದು ಶೇ.0.46ರಷ್ಟಿತ್ತು. ಆದರೆ ನಿನ್ನೆ ಶೇ.4.47ಕ್ಕೆ ಏರಿದ ಹಿನ್ನೆಲೆಯಿಂದಾಗಿ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ.