ಕರ್ನಾಟಕದಲ್ಲಿ ಕಠಿಣ ಮಾರ್ಗಸೂಚಿ! ತಜ್ಞರ ಸಲಹೆಗಳೇನು?

ಮಂಗಳವಾರ, 4 ಜನವರಿ 2022 (09:02 IST)
ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

ಈ ನಡುವೆ ರಾಜ್ಯ ಮತ್ತೆ ಲಾಕ್ಡೌನ್ ಆಗುತ್ತಾ ಎಂಬ ಭೀತಿ ಶುರುವಾಗಿದೆ. ಲಾಕ್ಡೌನ್ನಿಂದ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಹೀಗಾಗಿ ಲಾಕ್ಡೌನ್ ಬದಲು ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೊಳಿಸುವ ಸಾಧ್ಯತೆಯಿದೆ.

* ಕೊರೊನಾ ಮಾರ್ಗಸೂಚಿ ಕಡ್ಡಾಯ ಜಾರಿ ಮಾಡಿ ನಿಗಾವಹಿಸವಬೇಕು.
* ಹೆಚ್ಚು ಕೊವಿಡ್ ಟೆಸ್ಟಿಂಗ್ ಮಾಡಬೇಕು
* ಶೇ.100 ರಷ್ಟು ಡಬಲ್ ಡೋಸ್ ವ್ಯಾಕ್ಸಿನ್ ಮಾಡಬೇಕು.
* ಮಾಲ್, ಥಿಯೇಟರ್, ಶಾಲಾ ಮಕ್ಕಳ ಪೋಷಕರಿಗೆ ಡಬಲ್ ಡೋಸ್ ಕಡ್ಡಾಯ ಮಾಡಬೇಕು.
* ಪಾರ್ಕ್, ಟ್ಯಾಕ್ಸಿ, ಆಟೋ ಸಂಚಾರಕ್ಕೂ 2 ಡೋಸ್ ಲಸಿಕೆ ರೂಲ್ಸ್ ಮಾಡಬೇಕು.
* ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಕೊವಿಡ್ ಟೆಸ್ಟ್ ಮಾಡಬೇಕು.
* ಮೂರಕ್ಕಿಂತ ಹೆಚ್ಚು ಸೋಂಕಿತರು ಕಂಡುಬರುವ ವಲಯವನ್ನ ಕಂಟೈನ್ಮೆಂಟ್ ಝೋನ್ ಮಾಡಬೇಕು.
* ಕ್ಲಸ್ಟರ್ ಮಟ್ಟದಲ್ಲಿ ಸೋಂಕು ಹೆಚ್ಚಾಗದಂತೆ ತಡೆಯಬೇಕು.
* ಪಾಸಿಟಿವಿಟಿ ರೇಟ್ ಏರಿಕೆಯಾದಂತೆ ಟಫ್ ರೂಲ್ಸ್ ಹಾಕಬೇಕು.
* ನೈಟ್ ಕರ್ಪ್ಯೂ ತಿಂಗಳು ಕೊನೆಯವೆಗೂ ಮುಂದುವರೆಸಬೇಕು.
* ಪಾಸಿಟಿವಿಟಿ ರೇಟ್ 3 ಕ್ಕಿಂತ ಹೆಚ್ಚಾದರೆ ವೀಕೆಂಡ್ ಕರ್ಪ್ಯೂ ಜಾರಿ ಮಾಡಬೇಕು.
* ಮದುವೆ, ಸಭೆ, ಸಮಾರಂಭ, ಉತ್ಸವಗಳಲ್ಲಿ ಹೆಚ್ಚು ಜನರ ಸೇರುವಿಕೆಗೆ ಕಡಿವಾಣ ಹಾಕಬೇಕು.

ಯೆಲ್ಲೋ, ಆರೆಂಜ್, ರೆಡ್ ಜೋನ್ ಆದಾರದ ಮೇಲೆ ನಿರ್ಬಂಧಕ್ಕೂ ಚಿಂತನೆ ನಡೆಸಲಾಗುತ್ತಿದೆ. ಕೊವಿಡ್ ಪಾಸಿಟಿವ್ ರೇಟ್ ಶೇ.1ರಷ್ಟು ಕಡಿಮೆ ಇದ್ದರೆ ಯೆಲ್ಲೋ ಅರ್ಲಟ್, ಪಾಸಿಟಿವ್ ರೇಟ್ ಶೇ.1ರಿಂದ 2ರಷ್ಟು ಇದ್ದರೆ ಆರೆಂಜ್, 2ಕ್ಕಿಂತ ಹೆಚ್ಚು ಇದ್ದರೆ ರೆಡ್ ಅಲರ್ಟ್ ಘೋಷಣೆ ಮಾಡಿ ಚಟುವಟಿಕೆಗಳಲ್ಲಿ ನಿರ್ಬಂಧಗಳನ್ನು ಹೇರಲು ಚಿಂತನೆ ನಡೆಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ