ಕೇಂದ್ರ ಸರ್ಕಾರ ಉದ್ಯೋಗ ಒದಗಿಸುವ ಕೆಲಸ ಮಾಡ್ತಿದೆ : ನರೇಂದ್ರ ಮೋದಿ

ಭಾನುವಾರ, 30 ಅಕ್ಟೋಬರ್ 2022 (13:29 IST)
ಗಾಂಧೀನಗರ : ಕೇಂದ್ರ ಸರ್ಕಾರ ಯುವಜನತೆಗೆ ಹತ್ತು ಲಕ್ಷ ಉದ್ಯೋಗಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್ ಸರ್ಕಾರವು ಇಲ್ಲಿ ಆಯೋಜಿಸಿದ್ದ ‘ರೋಜ್ಗಾರ್ ಮೇಳ’ದ ವೀಡಿಯೊ ಸಂದೇಶದಲ್ಲಿ, ಯುವಜನತೆಗೆ ಸರ್ಕಾರಿ ಉದ್ಯೋಗಗಳ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಸಮಾರಂಭದಲ್ಲಿ ಸುಮಾರು 5,000 ಜನರು ಗುಜರಾತ್ ಪಂಚಾಯತ್ ಸೇವಾ ಮಂಡಳಿಯಿಂದ ನೇಮಕಾತಿ ಪತ್ರಗಳನ್ನು ಪಡೆದರೆ,

8,000 ಜನರಿಗೆ ಗುಜರಾತ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಮಂಡಳಿ ಮತ್ತು ಲೋಕರಕ್ಷಕ ನೇಮಕಾತಿ ಮಂಡಳಿಯಿಂದ ನೇಮಕಾತಿ ಪತ್ರಗಳನ್ನು ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ