ಗೂಂಡಾಗಳ ವಿರುದ್ಧ ಕ್ರಮ?

ಸೋಮವಾರ, 21 ಫೆಬ್ರವರಿ 2022 (08:06 IST)
ಕೆಲ ಗೂಂಡಾಗಳು ತನ್ನ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸಿದ ಪರಿಣಾಮ ತಲೆಗೆ ಪೆಟ್ಟಾಯಿತು.

ಆದರೆ, ಈ ಸಂಬಂಧ ಯಾವುದೇ ಪೊಲೀಸರು ಕ್ರಮ ಕೈಗೊಂಡಿಲ್ಲ, ನಂತರ ವಿಧಾನಪರಿಷತ್ ಸದಸ್ಯರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸೈಯದ್ ಫಾರುಕ್ ಎಂಬುವರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ‘ಹಲ್ಲೆ ನಡೆದಾಗ ಪೊಲೀಸ್ ಠಾಣೆಯಲ್ಲಿ ದೂರು ನೀಡದೆ ಏಕೆ ಎಂಎಲ್ಸಿಗೆ ದೂರು ನೀಡಿದ್ದೀರಿ ಎಂಬುದು ಗೊತ್ತಿಲ್ಲ. ಪೊಲೀಸ್ ಠಾಣೆಯಲ್ಲಿ ಸರಿಯಾದ ಕ್ರಮದಲ್ಲಿ ದೂರು ನೀಡಿ ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ನೇರವಾಗಿ ಆಯುಕ್ತರ ಕಚೇರಿಗೆ ಬಂದು ನನ್ನನ್ನು ಭೇಟಿಯಾಗಬಹುದು’ ಎಂದರು.

 
ಬೆಂಗಳೂರು ಉತ್ತರ ವಿಭಾಗದಲ್ಲಿ ಬೀದಿಬದಿ ವ್ಯಾಪಾರಿಗಳು ಹೆಚ್ಚಿನ ಶಬ್ದ ಬರುವ ಧ್ವನಿವರ್ಧಕ ಬಳಸಿ ತೊಂದರೆ ನೀಡುತ್ತಿದ್ದಾರೆ ಎಂದು ನಿವಾಸಿಯೊಬ್ಬರು ದೂರಿದರು. ಉತ್ತರ ವಿಭಾಗದಲ್ಲಿ ಯಾವ ಪ್ರದೇಶವೆಂಬುದನ್ನು ತಿಳಿಸಿ, ನಿಮ್ಮ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ,

ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಆ ಭಾಗದ ಡಿಸಿಪಿ ಸಂಪರ್ಕಿಸಿ ಎಂದು ತಿಳಿಸಿದರು. ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಿಜಾಬ್ ತೆಗೆಯುವಂತೆ ಶಿಕ್ಷಕರು ಒತ್ತಾಯ ಮಾಡುತ್ತಿದ್ದಾರೆ ಎಂದು ನಾಗರಿಕರೊಬ್ಬರು ದೂರಿದರು. ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಏನನ್ನು ಹೇಳಲಾಗುವದಿಲ್ಲ. ಆದರೆ, ನ್ಯಾಯಾಲಯದ ಮಧ್ಯಂತರ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ