ಕರ್ನಾಟಕ ಸೇರಿ 3 ರಾಜ್ಯಗಳಿಗೆ ಅಲರ್ಟ್
ಪ್ರಸ್ತುತ ಚಂಡಮಾರುತ ಗೋವಾದಿಂದ ಪಶ್ಚಿಮಕ್ಕೆ 690 ಕಿ.ಮೀ, ಮುಂಬೈನ ಪಶ್ಚಿಮ-ನೈಋತ್ಯಕ್ಕೆ 640 ಕಿ.ಮೀ ಹಾಗೂ ಪೋರಬಂದರ್ನಿಂದ ನೈಋತ್ಯಕ್ಕೆ 640 ಕಿ.ಮೀ ದೂರದಲ್ಲಿ ಇದ್ದು, ಗಂಟೆಗೆ 145 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.
ಚಂಡಮಾರುತ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಹಾಗೂ ಬಲವಾದ ಗಾಳಿಯನ್ನು ಉಂಟುಮಾಡುತ್ತದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. ಶನಿವಾರ ಹಾಗೂ ಭಾನುವಾರ ಬಿಪರ್ಜೋಯ್ ಚಂಡಮಾರುತದ ಅಬ್ಬರ ಜೋರಾಗಲಿದೆ.