ರಾಜಸ್ಥಾನದಲ್ಲಿ ಭಾರೀ ಮಳೆ : 2 ದಿನದಲ್ಲಿ 13 ಬಲಿ!

ಸೋಮವಾರ, 29 ಮೇ 2023 (10:23 IST)
ಜೈಪುರ : ಕಳೆದ ಎರಡು ದಿನಗಳಲ್ಲಿ ರಾಜಸ್ಥಾನದಲ್ಲಿ ಮಳೆ ಮತ್ತು ಚಂಡಮಾರುತದ ಹೊಡೆತಕ್ಕೆ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
 
ಪೂರ್ವ ರಾಜಸ್ಥಾನದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಿದ್ದು, ರಾಜ್ಯದ ವಿವಿಧೆಡೆ ಗುಡುಗು ಸಹಿತ ಬಿರುಗಾಳಿ ಬೀಸಿ ಮಳೆಯಾಗಿತ್ತು. ಕಳೆದ ಎರಡು ದಿನಗಳಲ್ಲಿ 13 ಮಂದಿ ಮಳೆಗೆ ಸಾವನ್ನಪ್ಪಿದ್ದು, 10 ಮಂದಿ ಟೋಂಕ್ನಲ್ಲಿ ಸಾವನ್ನಪ್ಪಿದ್ದಾರೆ.

ಉಳಿದ ಮೂವರು ಅಲ್ವಾರ್, ಜೈಪುರ ಮತ್ತು ಬಿಕಾನೇರ್ನಲ್ಲಿ ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣಾ ಮತ್ತು ಪರಿಹಾರ ಇಲಾಖೆ ತಿಳಿಸಿದೆ.  ಭಿಲ್ವಾರದ ಮಂಡಲ್ನಲ್ಲಿ 11 ಸೆಂ.ಮೀ ಮಳೆಯಾಗಿದ್ದು, ಹನುಮಾನ್ಗಢದ ರಾವತ್ಸರ್ನಲ್ಲಿ 6 ಸೆಂ.ಮೀ ಮಳೆ ದಾಖಲಾಗಿದೆ.

ಅಷ್ಟೇ ಅಲ್ಲದೇ ಉಳಿದ ಪ್ರದೇಶಗಳಲ್ಲಿ ಸರಾಸರಿ 3 ಸೆಂ.ಮೀ ಮಳೆಯಾಗಿದೆ. ಜೂನ್ನಿಂದ ಸೆಪ್ಟೆಂಬರ್ವರೆಗಿನ ಮುಂಗಾರು ಋತುವಿನಲ್ಲಿ ಸರಾಸರಿ 96% ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ