ಆಪರೇಷನ್ ಕಮಲ ಮಾಡಲು ಹೋಗಿ ಕೈಸುಟ್ಟುಕೊಂಡ ಬಿಜೆಪಿ ನಾಯಕರ ಮೇಲೆ ಅಮಿತ್ ಶಾ ಗರಂ?
ಸರ್ಕಾರ ಉರುಳಿಸುವ ಪ್ರಯತ್ನ ಮಾಡಬೇಡಿ ಎಂದು ಸೂಚಿಸಿದರೂ ತೆರೆಮರೆಯಲ್ಲೇ ಆಪರೇಷನ್ ಕಮಲ ಮಾಡಲು ಹೋಗಿ ಕೈ ಸುಟ್ಟುಕೊಂಡ ರಾಜ್ಯ ನಾಯಕರ ಮೇಲೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗರಂ ಆಗಿದ್ದಾರೆ ಎನ್ನಲಾಗಿದೆ.
ಆಪರೇಷನ್ ಕಮಲ ಮಾಡಿ, ಸರ್ಕಾರ ಉರುಳಿಸಿ ಪಕ್ಷಕ್ಕೆ ಮುಜುಗರ, ಕೆಟ್ಟ ಹೆಸರು ತಂದುಕೊಂಡು ಇಮೇಜ್ ಕಳೆದುಕೊಳ್ಳಬೇಡಿ. ಈ ರೀತಿ ಮಾಡಿ ಲೋಕಸಭೆ ಚುನಾವಣೆಗೆ ಸಂಕಷ್ಟ ಎಳೆದುಕೊಳ್ಳಬೇಡಿ. ಸರ್ಕಾರ ಉರುಳಿಸುವ ಪ್ರಯತ್ನ ಮಾಡುವುದು ಬಿಟ್ಟು ಚುನಾವಣೆಯ ತಯಾರಿ ಮಾಡುವುದರತ್ತ ಗಮನ ಹರಿಸಿ ಎಂದು ಶಾ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.