ಸೋತರೂ ಕಾಂಗ್ರೆಸ್ ನವರು ಅದ್ಯಾಕೆ ಸೆಲೆಬ್ರೇಷನ್ ಮಾಡ್ತಿದ್ದಾರೋ: ಅಮಿತ್ ಶಾ ಟಾಂಗ್
‘ಕೇವಲ ಕಾಂಗ್ರೆಸ್ ಮಾತ್ರ ಸಂಭ್ರಮಿಸುತ್ತಿದೆ. ಆದರೆ ಕರ್ನಾಟಕದ ಜನ ಸೆಲೆಬ್ರೇಟ್ ಮಾಡುತ್ತಿಲ್ಲ. ಇವರ ಹೆಚ್ಚಿನ ಸಚಿವರೇ ಸೋತರೂ ಈ ಮಟ್ಟಿಗೆ ಅದ್ಯಾಕೆ ಕಾಂಗ್ರೆಸ್ ನವರು ಸೆಲೆಬ್ರೇಟ್ ಮಾಡುತ್ತಿದ್ದಾರೋ ಗೊತ್ತಿಲ್ಲ’ ಎಂದು ಶಾ ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಜತೆ ಸೇರಿಕೊಂಡು ಸರ್ಕಾರ ರಚಿಸುವ ಮೂಲಕ ಕಾಂಗ್ರೆಸ್ ಕರ್ನಾಟಕದಲ್ಲಿ ಜನಾದೇಶವನ್ನೇ ತಳ್ಳಿ ಹಾಕಿದೆ ಎಂದು ಅವರು ಆಪಾದಿಸಿದ್ದಾರೆ. 2019 ರ ಚುನಾವಣೆಯಲ್ಲಿ ನಾವು ಬಹುಮತದೊಂದಿಗೆ ಸರ್ಕಾರ ರಚಿಸಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.