ರಾಮನಗರ ಉಪಚುನಾವಣೆ: ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕಣಕ್ಕೆ
ಇಂದು ಕೇತಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಜೆಡಿಎಸ್ ಪ್ರಮುಖರೊಂದಿಗೆ ಸಭೆ ನಡೆಸಲಿರುವ ಕುಮಾರಸ್ವಾಮಿ ಬಳಿಕ ಅನಿತಾ ಸ್ಪರ್ಧೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಈ ಮೊದಲು ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವ ಬಗ್ಗೆಯೂ ಎಚ್ ಡಿಕೆ ಚಿಂತನೆ ನಡೆಸಿದ್ದರು. ಆದರೆ ನಿಖಿಲ್ ಈಗಲೇ ರಾಜಕೀಯ ಪ್ರವೇಶ ಬೇಡ ಎಂಬ ಕಾರಣಕ್ಕೆ ಪತ್ನಿಯನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ರಾಮನಗರ ತಮ್ಮ ಸ್ವಕ್ಷೇತ್ರವಾಗಿರುವುದರಿಂದ ಸಿಎಂ ಎಚ್ ಡಿಕೆಗೆ ಇದು ಪ್ರತಿಷ್ಠೆಯ ಕಣವಾಗಲಿದೆ.