ಮಹಾಘಟಬಂಧನ್ ವಿಫಲ ಐಡಿಯಾ ಎಂದ ಅರುಣ್ ಜೇಟ್ಲಿ
ಬಿಜೆಪಿ ನೇತೃತ್ವದ ಎನ್ ಡಿಎ ಒಂದು ಪ್ರಬಲ ಸ್ಥಿರ ಸರ್ಕಾರದ ಕೂಟ. ಹೀಗಾಗಿ ಜನ ಗೊತ್ತಿದ್ದೂ ಗೊತ್ತಿದ್ದೂ ವೈಫಲ್ಯಕ್ಕೊಳಗಾದ ಪಕ್ಷಗಳಿಗೆ ಮತ ಹಾಕಿ ಆತ್ಮಹತ್ಯೆ ಮಾಡಿಕೊಳ್ಳಲ್ಲ ಎಂದು ಜೇಟ್ಲಿ ಲೇವಡಿ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಮುಂಬರುವ ಲೋಕಸಭೆ ಚುನಾವಣೆ ಸ್ಥಿರ ಸರ್ಕಾರ ನೀಡುವ ಎನ್ ಡಿಎ ಕೂಟ ಮತ್ತು ಅಸ್ಥಿರ ಆಡಳಿತ ನೀಡುವ ಕೂಟದ ನಡುವಿನ ಹೋರಾಟವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.