ಪ್ಲಾಸ್ಟಿಕ್ ವಸ್ತುಗಳು ಬ್ಯಾನ್ !

ಶನಿವಾರ, 2 ಜುಲೈ 2022 (09:42 IST)
ಬೆಂಗಳೂರು : ದೇಶದಲ್ಲಿ ಇಂದಿನಿಂದ ಹೊಸ ಶಕೆ ಆರಂಭವಾಗಲಿದೆ. ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಬ್ಯಾನ್ ಆಗಲಿವೆ.

ಕೇಂದ್ರ ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ)  ಅಧ್ಯಕ್ಷ ತಿಮ್ಮಯ್ಯ ಸುದ್ದಿಗೋಷ್ಠಿ ನಡೆಸಿ, ಏಕ ಬಳಕೆ ಪ್ಲಾಸ್ಟಿಕ್ ಬ್ಯಾನ್ ಆಗ್ತಿರುವ ಬಗ್ಗೆ ಮಾಹಿತಿ ನೀಡಿದರು.

ನಾಳೆಯಿಂದ ಪ್ಲಾಸ್ಟಿಕ್ ಕಡ್ಡಿ ಹೊಂದಿರುವ ಇಯರ್ ಬಡ್ಸ್, ಬಲೂನ್ನ ಪ್ಲಾಸ್ಟಿಕ್ ಕಡ್ಡಿ, ಐಸ್ಕ್ರೀಂ-ಕ್ಯಾಂಡಿ ಸ್ಟಿಕ್, ಪ್ಲಾಸ್ಟಿಕ್ ಪ್ಲೇಟ್ಸ್, ಕಪ್ಸ್, ಗ್ಲಾಸ್, ಸ್ಪೂನ್, ಪ್ಲಾಸ್ಟಿಕ್ ಚಾಕು ಎಲ್ಲಾ ಬ್ಯಾನ್ ಆಗಲಿವೆ. 

ಈ ನಿಷೇಧಿತ ಪ್ಲಾಸ್ಟಿಕ್ ಬಳಸಿದ್ರೆ, ಮಾರಾಟ ಮಾಡಿದ್ರೆ ದಂಡ ವಿಧಿಸಲಾಗುತ್ತದೆ. ಉತ್ಪಾದಕರಿಗೆ 5 ರಿಂದ 20 ಸಾವಿರ ರೂಪಾಯಿವರೆಗೂ ದಂಡ, ಮಾರಾಟಗಾರರಿಗೆ 200 ರೂಪಾಯಿಯಿಂದ 1 ಸಾವಿರ ರೂಪಾಯಿವರೆಗೂ ದಂಡ ಬೀಳಲಿದೆ.

ಜೊತೆಗೆ ಎಲ್ಲಾ ವಸ್ತುಗಳು ಸೀಜ್ ಆಗಲಿವೆ. ಕೆಎಸ್ಪಿಸಿಬಿ ಜುಲೈ 1 ರಿಂದ ನಿಷೇಧಿತ ವಸ್ತುಗಳ ಪಟ್ಟಿಯನ್ನು ಸಹ ಸಿದ್ಧಪಡಿಸಿದ್ದು, ಅವರು ಪ್ಲಾಸ್ಟಿಕ್ಗೆ ಪರ್ಯಾಯಗಳನ್ನು ಒದಗಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಮಿಶ್ರಗೊಬ್ಬರ ಚೀಲಗಳು ಮತ್ತು ಬಟ್ಟೆ ಚೀಲಗಳ ಪೂರೈಕೆಗೆ ಮಂಡಳಿಯು ಈಗಾಗಲೇ ಅನುಮೋದನೆ ನೀಡಿದೆ.

ನಿಷೇಧ ಆದೇಶವು ಕಟ್ಟುನಿಟ್ಟಾಗಿ ಜಾರಿಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಅಧಿಕಾರವನ್ನು ನೀಡಿದೆ. ಕಟ್ಟುನಿಟ್ಟಿನ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು, ಮಂಗಳವಾರ ಮಾರ್ಷಲ್ಗಳೊಂದಿಗೆ ಸಭೆ ನಡೆಸಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ