ಬಾಳೆಹಣ್ಣಿಗೆ ಬಂತು ಬಂಗಾರದ ಬೆಲೆ!

ಭಾನುವಾರ, 13 ಆಗಸ್ಟ್ 2023 (09:43 IST)
ಕೋಲಾರ :  ಶ್ರಾವಣ ಮಾಸದ ಆರಂಭವಾಗಿ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಈಗ ಟೊಮೆಟೋ ಸ್ಥಾನವನ್ನು ಬಾಳೆಹಣ್ಣು ತುಂಬಲಿದೆ. ಸದ್ಯ ಬಾಳೆಹಣ್ಣು ಬೆಳೆದವರಿಗೆ ಜಾಕ್ಪಾಟ್ ಎನ್ನುವಂತಾಗಿದ್ದು ಬಾಳೆ ಬೆಳೆದ ರೈತನ ಬದುಕು ಬಂಗಾರವಾಗಿದೆ.
 
ಕೋಲಾರದಲ್ಲಿ ಕಳೆದ ಎರಡು ಮೂರು ತಿಂಗಳಿಂದ ಟೊಮೆಟೋ ಬೆಲೆ ಏರಿಕೆ ಸದ್ದು ಜೋರಾಗಿತ್ತು. ಆದರೆ ಟೊಮೆಟೋ ಬೆಲೆ ಈಗ ಕಡಿಮೆಯಾಗಿದೆ. ಆದರೆ ಟೊಮೆಟೋ ರೀತಿಯಲ್ಲಿ ಈಗ ಹೆಚ್ಚು ಸದ್ದು ಮಾಡುತ್ತಿರುವುದು ಬಾಳೆ ಹಣ್ಣು. ಇನ್ನೇನು ಶ್ರಾವಣ ಮಾಸ ಆರಂಭವಾಗಲಿದ್ದು, ವರಮಹಾಲಕ್ಷ್ಮಿ, ಗೌರಿ-ಗಣೇಶ ಹಬ್ಬ, ದಸರಾ ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳಿವೆ.

ಈ ಹಿನ್ನೆಲೆಯಲ್ಲಿ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಬಾಳೆ ಹಣ್ಣು ಬೆಳೆದ ರೈತರಿಗೆ ಜಾಕ್ಪಾಟ್ ಬೆಲೆ ಸಿಗುತ್ತಿದೆ. ಏಲಕ್ಕಿ ಬಾಳೆಹಣ್ಣು ಬೆಳೆದಿರುವ ಕೋಲಾರ ಜಿಲ್ಲೆಯ ದೊಡ್ಡಕಾರಿ ಗ್ರಾಮದ ಪ್ರಭಾಕರ್ ಅವರಿಗೆ ಭರ್ಜರಿ ಬೆಲೆ ಸಿಕ್ಕಿದೆ. ಐದು ಲಕ್ಷ ರೂಪಾಯಿ ಬಂಡವಾಳ ಹಾಕಿ 15 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ.

ಪ್ರಭಾಕರ್ ತಮ್ಮ ಎರಡೂವರೆ ಎಕರೆ ಪ್ರದೇಶದಲ್ಲಿ ಬಾಳೆಹಣ್ಣು ಬೆಳೆದಿದ್ದು, ಉತ್ತಮ ಫಸಲು ಬಂದಿದೆ. ರೈತರು ತೋಟದಲ್ಲೇ ಒಂದು ಕೆ.ಜಿ. ಬಾಳೆಹಣ್ಣಿಗೆ 75-80 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ವಿವಿಧ ಕಂಪನಿಗಳು, ವಿವಿಧ ಮಾರುಕಟ್ಟೆಗಳಿಂದ ರೈತರ ತೋಟಕ್ಕೆ ಬಂದು ಬಾಳೆಹಣ್ಣು ಖರೀದಿ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ