ನಿಟ್ಟುಸಿರು ಬಿಟ್ಟ ಗ್ರಾಹಕರು : ಟೊಮೆಟೋ ಬೆಲೆಯಲ್ಲಿ ಕೊಂಚ ಇಳಿಕೆ

ಸೋಮವಾರ, 7 ಆಗಸ್ಟ್ 2023 (09:28 IST)
ಕೋಲಾರ : ಟೊಮೆಟೋ ಬೆಳೆ ಕೋಲಾರ ಜಿಲ್ಲೆಯ ರೈತರ ಪಾಲಿಗೆ ಜೂಜಾಟದ ಬೆಳೆಯಾಗಿ ಪರಿಣಮಿಸಿದೆ. ಯಾಕಂದ್ರೆ ಬೆಳೆ ಇದ್ದರೆ ಬೆಲೆ ಇರಲ್ಲ, ಬೆಲೆ ಇದ್ದಾಗ ಬೆಳೆ ಬರಲ್ಲ ಇದು ಟೊಮೆಟೋ ಬೆಳೆಗಾರರ ಸ್ಥಿತಿ. ಟೊಮೆಟೋಗೆ ಇಂದು ಸಿಕ್ಕ ಬೆಲೆ ನಾಳೆ ಸಿಗಲ್ಲ, ಇದು ರೈತರ ಪರಿಸ್ಥಿತಿಯಾದ್ರೆ ಗ್ರಾಹಕರಂತೂ ಫುಲ್ ಖುಷಿಯಾಗಿದ್ದಾರೆ.
 
ಕಳೆದ ಮೂರು ದಿನಗಳಲ್ಲಿ 900 ರಿಂದ 1000 ರೂಪಾಯಿವರೆಗೆ ಇಳಿಕೆಯಾಗುವ ಮೂಲಕ ರೈತರಲ್ಲಿ ಆತಂಕ ಉಂಟಾಗಿದ್ರೆ, ಗ್ರಾಹಕರು ಕೊಂಚ ನಿರಾಳರಾಗಿದ್ದಾರೆ. ಕಳೆದ 2 ತಿಂಗಳಿನಿಂದ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ಭಾರೀ ಬೆಲೆಯಲ್ಲಿ ಹರಾಜಾಗುತ್ತಿತ್ತು. ಕಳೆದ ನಾಲ್ಕು ದಿನಗಳಿಂದ ಬೆಲೆ ಕುಸಿಯುವ ಮೂಲಕ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸರಾಸರಿ 15 ಕೆಜಿಯ ಟೊಮೆಟೋ ಬಾಕ್ಸ್ ಬೆಲೆ ಕೇವಲ 1,500 ರೂಪಾಯಿಗೆ ಅಂದ್ರೆ ಅತಿ ಹೆಚ್ಚು ಗುಣಮಟ್ಟ ಇರುವ ಟೊಮೆಟೋ ಬಿಕರಿಯಾಗಿದೆ. ಆ ಮೂಲಕ ಟೊಮೆಟೋ ಬೆಳೆ ನಿನ್ನೆ-ಮೊನ್ನೆ ಬೆಲೆಗೆ ಹೋಲಿಕೆ ಮಾಡಿದ್ರೆ 900 ರಿಂದ 1000 ರೂಪಾಯಿ ಕಡಿಮೆಯಾಗಿದೆ. ಸದ್ಯ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ತಮಿಳುನಾಡು, ಆಂಧ್ರಪ್ರದೇಶದಿಂದಲೂ ಟೊಮೆಟೋ ಬರುತ್ತಿದ್ದು, ಬೆಲೆ ಇಳಿಮುಖವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ