ಬಂದ್ ಆಗ್ತಿದೆಯಾ ಶಿರಾಡಿ ಘಾಟ್..?

ಸೋಮವಾರ, 27 ಜೂನ್ 2022 (14:18 IST)
ಹಾಸನ : ಹೆದ್ದಾರಿ ಕಾಮಗಾರಿ ನಡೆಸುವ ಸಲುವಾರಿ ಶಿರಾಡಿ ರಸ್ತೆಯನ್ನು ಸುಮಾರು ನಾಲ್ಕು ತಿಂಗಳುಗಳ ಕಾಲ ಬಂದ್ ಮಾಡುವ ವಿಚಾರವಾಗಿ ಮತ್ತೆ ಚರ್ಚೆ ಶುರುವಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ, ದೋಣಿಗಾಲ್ ನಿಂದ ಮಾರನಹಳ್ಳಿವರೆಗೆ ಸುಮಾರು 14 ಕಿಲೋಮೀಟರ್ ದೂರ ಶಿರಾಡಿ ಹೆದ್ದಾರಿ ಬಂದ್ ಮಾಡಿ, ಕಾಮಗಾರಿ ನಡೆಸಲು ಗುತ್ತಿಗೆದಾರರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಿಂದ ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಹೋಗಲು ಶಿರಾಡಿಘಾಟ್ ರಸ್ತೆಯೇ ಮುಖ್ಯ ರಸ್ತೆಯಾಗಿದೆ.

ಅಷ್ಟೇ ಅಲ್ಲದೆ ಚನ್ನೈ ಟು ಮಂಗಳೂರು ಬಂದರಿಗೆ ಕೂಡ ಇದೇ ಶಿರಾಡಿಘಾಟ್ ಮೂಲಕ ಹೋಗಬೇಕು. ಆದರೆ ಶಿರಾಡಿಘಾಟ್ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ದುರಸ್ತಿಗೆ ಸುಮಾರು ನಾಲ್ಕು ತಿಂಗಳುಕಾಲ ಶಿರಾಡಿಘಾಟ್ ಬಂದ್ ಮಾಡಬೇಕಾಗುತ್ತದೆ. 

ಇದೀಗ ಮತ್ತೆ ಶಿರಾಡಿಘಾಟ್ ರಸ್ತೆ ಬಂದ್ ಮಾಡುತ್ತಿದ್ದರೆ. ಅಷ್ಟೇ ಅಲ್ಲದೆ ಸಕಲೇಶಪುರ ಹೆಚ್ಚು ಮಳೆಯಾಗುವ ಭಾಗವಾಗಿದ್ದು, ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿದ್ರೆ ಹೇಗೆ ಕೆಲಸ ಮಾಡುತ್ತಾರೆ ಎಂಬ ಚರ್ಚೆ ಕೂಡ ಶುರುವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ