ವ್ಯಾಪಾರಿಗಳ ಮೇಲೆ ದಂಡ ವಿಧಿಸಲು ಮುಂದಾದ ಬಿಬಿಎಂಪಿ!

ಸೋಮವಾರ, 25 ಜುಲೈ 2022 (10:15 IST)
ಬೆಂಗಳೂರು : ಮಾಸ್ಕ್ ದಂಡ, ಕಸದ ದಂಡ, ಪ್ಲಾಸ್ಟಿಕ್ ಬಳಕೆ ದಂಡ ಹಾಕಿದ್ದ ಬಿಬಿಎಂಪಿ, ಈಗ ತರಕಾರಿ ವ್ಯಾಪಾರಿಗಳ ಮೇಲೆ ದಂಡ ಪ್ರಯೋಗಕ್ಕೆ ಮುಂದಾಗಿದೆ.
 
ಕೆ.ಆರ್ ಮಾರ್ಕೆಟ್ ರೀತಿಯ ಬೃಹತ್ ಮಾರ್ಕೆಟ್ಗೆ ತರಕಾರಿ ಮಾರಲು ತಂದವರು ವ್ಯಾಪಾರ ನಡೆಸಿದ ಬಳಿಕ ಉಳಿದ ತರಕಾರಿಗಳನ್ನು ಮಂಡಿಯಲ್ಲೇ ಬಿಟ್ಟು ಹೋಗ್ತಾರೆ.

ಆ ರೀತಿ ತರಕಾರಿಗಳನ್ನು ಮಂಡಿಯಲ್ಲಿ ಬಿಟ್ಟು ಹೋದವರ ಮೇಲೆ ಇನ್ಮುಂದೆ ದಂಡ ಬೀಳಲಿದೆ. ಕೆ.ಆರ್ ಮಾರ್ಕೆಟ್ ಬಳಿ ಮಾರ್ಷಲ್ಗಳು ಮೈಕ್ನಲ್ಲಿ ಈ ರೀತಿ ಅನೌನ್ಸ್ ಮಾಡುತ್ತಿದ್ದಾರೆ. 

ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ದಂಡ ಹಾಕುವುದಕ್ಕೆ ಬಿಬಿಎಂಪಿ ಮುಂದಾಗಿದೆ. ತರಕಾರಿ ಎಷ್ಟು ಬಿಟ್ಟು ಹೋಗಿದ್ದಾರೆ ಎಂಬ ತೂಕದ ಆಧಾರದ ಮೇಲೆ ದಂಡ ಹಾಕಲಾಗುತ್ತದೆ.

ಅರ್ಧ ಟನ್, ಒಂದು ಟನ್ವರೆಗೂ ತರಕಾರಿ ಮಾರ್ಕೆಟ್ನಲ್ಲಿ ಬಿಟ್ಟು ಹೋದ್ರೆ 5 ಸಾವಿರದಿಂದ 10 ಸಾವಿರದವರೆಗೂ ದಂಡ ಹಾಕಲು ನಿರ್ಧರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ