ಬೆಂಗಳೂರು : ಕರ್ನಾಟಕ ಸರ್ಕಾರ ಮಹತ್ವದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ “ಗೃಹ ಜ್ಯೋತಿ”ಗೆ ಅಭೂತಪೂರ್ವ ರೆಸ್ಪಾನ್ಸ್ ದೊರೆತಿದೆ.
ಆರಂಭದ ವೇಳೆಯೇ ಸೈಬರ್ ಕಳ್ಳರ ಕೈಚಳಕ ಆತಂಕ ಮೂಡಿಸಿದೆ. ಆರೋಪಿಗಳು ಬೆಸ್ಕಾಂ ಗ್ರಾಹಕರಿಗೆ ಕರೆ ಮಾಡಿ ಬಿಲ್ ಬಾಕಿ ಇದೆ ಬೇಗ ಬಿಲ್ ಕಟ್ಟಿ ಇಲ್ಲವಾದರೆ ಕನೆಕ್ಷನ್ ಕಟ್ ಆಗುತ್ತದೆ ಎಂದು ಸಾವಿರಾರು ರೂಪಾಯಿ ದೋಚಿರುವ ಆರೋಪ ಕೇಳಿಬಂದಿದೆ.
ಹೀಗೆ ನಗರದ ಕಾಡುಗೋಡಿ ನಿವಾಸಿ ನಾರಾಯಣ್ ಪ್ರಸಾದ್ ಅವರಿಗೆ ಕರೆ ಮಾಡಿ ಸುಳ್ಳು ಹೇಳಿ ಅಕೌಂಟ್ನಿಂದ 53 ಸಾವಿರ ರೂ. ವಂಚಿಸಿದ್ದಾರೆ.
ಸೈಬರ್ ಕಳ್ಳರು ಮೊದಲಿಗೆ ನಾರಾಯಣ್ ಅವರ ಮೊಬೈಲ್ ನಂಬರ್ಗೆ ಒಂದು ಲಿಂಕ್ ಕಳಿಸಿದ್ದಾರೆ. ಬಳಿಕ ಕರೆ ಮಾಡಿ ಬೆಸ್ಕಾಂ ಬಿಲ್ ಬಾಕಿ ಇದೆ ಎಂದು ಹೇಳಿದ್ದಾರೆ. ನೀವು ಇಂದೇ ಬೆಸ್ಕಾಂ ಬಿಲ್ ಕಟ್ಟಬೇಕು ಇಲ್ಲವಾದರೇ ಕನೆಕ್ಷನ್ ಕಟ್ ಆಗುತ್ತೆ ಎಂದು ಹೇಳಿದ್ದಾರೆ. ಅದಕ್ಕೆ ನಾರಾಯಣ್ ಪ್ರಸಾದ್ ಗಾಬರಿಯಾಗಿ ಹೇಗೆ ತುಂಬುವುದು ಎಂದಿದ್ದಾರೆ.