ಬಿಬಿಎಂಪಿಯಿಂದ ಬಿಗ್ ಶಾಕ್!

ಮಂಗಳವಾರ, 19 ಏಪ್ರಿಲ್ 2022 (11:36 IST)
ಬೆಂಗಳೂರು : ಹಿಂದವೀ ಮೀಟ್ ಮಾರ್ಟ್ ಮಾಲೀಕರಿಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದ್ದು, ಪಾಲಿಕೆಯಿಂದ ಲೈಸೆನ್ಸ್ ಪಡೆದಿಲ್ಲ ಎಂದು ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ.

ಹಿಂದವೀ ಮೀಟ್ ಮಾರ್ಟ್ ಹಲಾಲ್ ಕಟ್ ವಿರುದ್ಧ ಅಭಿಯಾನ ನಡೆಸಿದ್ದರು. ಅವರು ಹಲಾಲ್ ಕಟ್ಗೆ ಸೈಡ್ ಹೊಡೆಯಲು ಜಟ್ಕಾ ಕಟ್ ಮಾರಾಟ ಮಾಡತ್ತಿದ್ದು, ಆದರೆ ಇದೀಗ ಹಿಂದವೀ ಮೀಟ್ ಮಾರ್ಟ್ಗಳು ಅಂಗಡಿಯನ್ನು ತೆರೆಯಲು ಪಾಲಿಕೆಯಿಂದ ಲೈಸೆನ್ಸ್ ಪಡೆದಿಲ್ಲ ಎನ್ನುವ ಕಾರಣಕ್ಕೆ ಹಿಂದವೀ ಮೀಟ್ ಮಾರ್ಟ್ ಮಾಲೀಕರಿಗೆ ನೋಟಿಸ್ ನೀಡಿದೆ.

ಬಿಬಿಎಂಪಿ ಪಶುಪಾಲನೆ (ಆರ್.ಆರ್ ನಗರ ವಲಯ) ನೋಟಿಸ್ನ್ನು ಜಾರಿ ಮಾಡಿದ್ದು, ಪಶುಪಾಲನೆ ಸಹಾಯಕ ನಿರ್ದೇಶಕರಿಂದ ಜಟ್ಕಾ ಮಳಿಗೆಗಳಿಗೆ ನೋಟಿಸ್ ಹೋಗಿದೆ. ಪರವಾನಗಿ ಪಡೆಯದೆಯೇ ಅಂಗಡಿಗಳನ್ನು ತೆರೆದಿರುವ ಪರಿಣಾಮವಾಗಿ ಬಿಬಿಎಂಪಿ ಪಶುಪಾಲನೆ ಸಹಾಯಕ ನಿರ್ದೇಶಕರಿಂದ ನೋಟಿಸ್ ಜಾರಿ ಮಾಡಿದೆ. 

ಇದೇ ಏಪ್ರಿಲ್ 12ರಂದು ನೋಟಿಸ್ ನೀಡಿರುವ ಬಿಬಿಎಂಪಿ ಪರವಾನಗಿ ಇಲ್ಲದಿರುವುದು ಸೇರಿದಂತೆ ಹಲವು ಅಂಶಗಳನ್ನು ಉಲ್ಲೇಖಿಸಿದೆ. ನೋಟಿಸ್ ನೀಡಿದ ಒಂದು ವಾರದೊಳಗೆ ಪರವಾನಗಿ ಪಡೆಯುವಂತೆ ಆದೇಶಿಸಲಾಗಿದೆ. ಇಲ್ಲವಾದರೆ ಮಳಿಗೆಗೆ ಬೀಗ ಹಾಕುವುದಾಗಿ ಮೌಖಿಕ ಎಚ್ಚರಿಕೆ ನೀಡಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ