ಕೊರೋನಾ ಸೋಂಕು ಹೆಚ್ಚಳ !

ಸೋಮವಾರ, 18 ಏಪ್ರಿಲ್ 2022 (11:18 IST)
ನ್ಯೂಯಾರ್ಕ್ : ಜಾಗತಿಕ ಮಟ್ಟದಲ್ಲಿ ಮತ್ತೆ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ,
 
(ಡಬ್ಲ್ಯುಎಚ್ಒ), ಯಾವುದೇ ದೇಶಗಳು ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸದೇ ಎಚ್ಚರವಾಗಿರಬೇಕು. ಈಗಿನ ಪ್ರಕರಣಗಳು ಸುಳಿವು ಮಾತ್ರ. ಮುಂದೆ ಇನ್ನಷ್ಟುಸೋಂಕು ಹೆಚ್ಚಬಹುದು ಎಂದಿದೆ.

ಈ ಕುರಿತು ಹೇಳಿಕೆ ನೀಡಿರುವ ಡಬ್ಲ್ಯುಎಚ್ಒದ ಮುಖ್ಯಸ್ಥ ಟೆಡ್ರೋಸ್ ಆಧನೋಮ್ ಗೇಬ್ರಿಯೇಸಸ್ ‘ಸತತ ಒಂದು ತಿಂಗಳ ಕುಸಿತದ ಹಾದಿಯ ಬಳಿಕ ಕಳೆದ ವಾರ ವಿಶ್ವದಾದ್ಯಂತ ಹೊಸ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದೆ.

ಭಾರೀ ವೇಗದಲ್ಲಿ ಹರಡುವ ಒಮಿಕ್ರೋನ್ ವೈರಸ್ ತಳಿ ಹಾವಳಿ, ಒಮಿಕ್ರೋನ್ನ ಉಪತಳಿ ಬಿಎ.2 ಪ್ರಮಾಣ ಹೆಚ್ಚಳ, ಸೋಂಕು ಇಳಿಕೆಯಾಗಿದೆಯೆಂದು ಸಾರ್ವಜನಿಕ ನಿರ್ಬಂಧ ಕ್ರಮಗಳನ್ನು ಹಿಂದಕ್ಕೆ ಪಡೆದಿದ್ದು,

ಕೆಲ ದೇಶಗಳಲ್ಲಿ ಲಸಿಕೆ ವಿತರಣೆ ಪ್ರಮಾಣ ಕಡಿಮೆ ಇರುವುದು, ಸೋಂಕಿನ ಕುರಿತು ಕೆಲವೆಡೆ ಹಬ್ಬಿಸಲಾದ ಸುಳ್ಳು ಸುದ್ದಿಗಳು ಸೋಂಕಿನ ಪ್ರಮಾಣ ಏರಿಕೆಗೆ ಕಾರಣವಾಗಿದೆ. ಅದರಲ್ಲೂ ಬಹುತೇಕ ದೇಶಗಳಲ್ಲಿ ಸೋಂಕು ಪತ್ತೆ ಪ್ರಮಾಣ ಇಳಿಕೆಯಾಗಿರುವ ಹೊರತಾಗಿಯೂ ಇಷ್ಟೊಂದು ಪ್ರಮಾಣದಲ್ಲಿ ಕೇಸು ಪತ್ತೆಯಾಗುತ್ತಿದೆ ಎಂದರೆ, ಇದು ಬಹುದೊಡ್ಡ ಅಪಾಯದ ಸುಳಿವು’ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ