ಹೆಣದ ಮೇಲೆ ಬಿಜೆಪಿ ರಾಜಕೀಯ ಮಾಡ್ತಿದೆ ಎಂದ ಕೈ ಮುಖಂಡ

ಶನಿವಾರ, 2 ಮಾರ್ಚ್ 2019 (15:28 IST)
ಬೇರೆಯವರ ಹೆಣದ ಮೇಲೆ ರಾಜಕೀಯ ಮಾಡೋದು, ನಮ್ಮ ಸೀಟ್ ಹೆಚ್ಚಿಗೆ ಬರ್ತಾವೆ ಎಂದು ಬಿಜೆಪಿಯವರು ಹೇಳೋದು ಸರಿಯಲ್ಲ ಅಂತ ಕಾಂಗ್ರೆಸ್ ಹಿರಿಯ ಮುಖಂಡ ಖಂಡಿಸಿದ್ದಾರೆ.

ಕೇಂದ್ರದ ಹಿಂದಿನ ಸರ್ಕಾರ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರಲಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಮೋದಿಯ ಪ್ರತಿ ಮಾತಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ.

ಚುನಾವಣೆ ವೇಳೆ ಇಂತಹ ಮಾತುಗಳಿಂದ ರಾಜಕೀಯವಾಗಿ ಬಳಸ್ತಿದಾರೆ ಎಂದು ಸ್ಪಷ್ಟವಾಗುತ್ತದೆ. ಬಿ.ಎಸ್.ಯಡಿಯೂರಪ್ಪ ಸಹ ಇದರ ಪರಿಣಾಮ 22ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳಿಕೆ ಕೊಟ್ಟರು.
ಅವರ ಬಾಯಲ್ಲಿ ಇಂತಹ ಮಾತು ಹೊರಬೀಳುತ್ತದೆ ಎಂದ್ರೆ ಪಕ್ಷದಲ್ಲಿ ಈ ಬಗ್ಗೆ ಚರ್ಚೆಯಾಗ್ತಿದೆ ಎಂದೇ ಅರ್ಥ ಅಂತ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಬೇರೆಯವರ ಹೆಣದ ಮೇಲೆ ರಾಜಕೀಯ ಮಾಡೋದು, ನಮ್ಮ ಸೀಟ್ ಹೆಚ್ಚಿಗೆ ಬರ್ತಾವೆ ಎಂಬುದು ಸರಿಯಲ್ಲ ಅಂತ ಬಿಜೆಪಿಗೆ ಟಾಂಗ್ ನೀಡಿದ ಅವರು, ಪಾಕ್ ಸೇನೆಯಿಂದ ನಿರಂತವಾಗಿ ಅಪ್ರಚೋದಿತ ಗುಂಡಿನ ದಾಳಿಯಾಗುತ್ತಿದೆ.  ಪಿಒಕೆ ಮತ್ತು ನಮ್ಮ ಗಡಿ ಭಾಗದಲ್ಲಿ ಮೊದಲಿನಿಂದಲೂ ದಾಳಿ ಮಾಡ್ತಿದಾರೆ. ನಮ್ಮ ಇಂಟೆಲಿಜೆನ್ಸ್ ಗಂಭೀರ ಚಿಂತನೆ ಮಾಡಿ ದೇಶಕ್ಕೆ ಒಳ್ಳೆಯದಾಗುವ ನಿರ್ಣಯ ಕೈಗೊಳ್ಳಬೇಕು. ಸೈನಿಕರು ಅಲರ್ಟ್ ಆಗಿದ್ದು, ಪಾಕ್ ಸೇನೆಗೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ. ಅಭಿನಂದನ್ ವಾಪಸ್ ಆಗಿದ್ದನ್ನು ಸ್ವಾಗತಿಸುತ್ತೇವೆ ಎಂದು ಕಲಬುರಗಿಯಲ್ಲಿ ಖರ್ಗೆ ಹೇಳಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ