ಇಂದಿನಿಂದ ಎರಡು ದಿನ ಬೆಂಗಳೂರಿನಲ್ಲಿ ಪ್ರವಾಸ ಮಾಡಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ಬುಧವಾರ, 18 ಏಪ್ರಿಲ್ 2018 (06:33 IST)
ಬೆಂಗಳೂರು : ಇಂದಿನಿಂದ ಎರಡು ದಿನ (ಬುಧವಾರ ಹಾಗೂ ಗುರುವಾರ ) ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರವಾಸ ಮಾಡಲಿದ್ದಾರೆ.


ಬಸವ ಜಯಂತಿ ಪ್ರಯುಕ್ತ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರವಾಸ ಆರಂಭಿಸಲಿರುವ ಅಮಿತ್ ಶಾ ಅವರು ನವಕರ್ನಾಟಕ ಜನಪರ ಶಕ್ತಿ ಕಾರ್ಯಕ್ರಮದ ಎರಡನೇ ಹಂತದಲ್ಲಿ ಮನೆಮನೆಗೆ ಹೋಗಿ ಅಭಿಪ್ರಾಯ ಪಡೆಯಲಿದ್ದಾರೆ. ಹಾಗೇ ಶಕ್ತಿಕೇಂದ್ರ ಪ್ರಮುಖರ ಸಭೆ, ರೋಡ್ ಶೋ, ಪದಾಧಿಕಾರಿಗಳ ಸಭೆ ಹಾಗೂ ವಿವಿಧ ಕ್ಷೇತ್ರದ ಗಣ್ಯರ ಜತೆ ಸಂವಾದ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.


ಇದಲ್ಲದೇ ಇಂದು ಅಮಿತ್ ಶಾ ಅವರು ಚುನಾವಣೆಯಲ್ಲಿ ರಾಜ್ಯದ ಜನರ ಮನಸ್ಸನ್ನು ತಮ್ಮತ್ತ ಒಲಿಸಿಕೊಳ್ಳುವುದು ಹೇಗೆ? ಯಾವ ವಯಸ್ಸಿನವರನ್ನು ಹೇಗೆ ಸೆಳೆಯಬಹುದು? ಮಕ್ಕಳನ್ನು ಇಷ್ಟಪಡಿಸುವುದು ಹೇಗೆ? ಯಾವ ಸಮಯದಲ್ಲಿ ಎಲ್ಲಿ ಪ್ರಚಾರ ಮಾಡಿದರೆ ಯಾರನ್ನು ಒಲಿಸಿಕೊಳ್ಳಬಹುದು ಇತ್ಯಾದಿ ವಿಚಾರಗಳ ಬಗ್ಗೆ ರಾಜ್ಯದ ನಾಯಕರು ಮತ್ತು ಕಾರ್ಯಕರ್ತರಿಗೆ ಪಾಠ ಮಾಡಲಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ