ಬಾಂಬ್ ಸ್ಫೋಟ: ಮೋದಿ ಹತ್ಯೆಗೆ ಯತ್ನ!
ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಉಗ್ರರು ಸಂಚು ರೂಪಿಸಿದ್ದರು. ಇತರೇ ಸ್ಥಳಗಳಲ್ಲಿ ನಡೆದ ಸ್ಫೋಟದಲ್ಲಿ ಮೃತಪಟ್ಟವರನ್ನು ಮತ್ತು ಗಾಯಗೊಂಡವರನ್ನು ನೋಡಲು ಮೋದಿ ಆಸ್ಪತ್ರೆಗೆ ಭೇಟಿ ನೀಡಿಯೇ ನೀಡುತ್ತಾರೆ ಎನ್ನುವುದು ಉಗ್ರರಿಗೆ ಗೊತ್ತಿತ್ತು.
ಈ ಕಾರಣಕ್ಕೆ ಮೋದಿ ಹತ್ಯೆಗೆ ಆಸ್ಪತ್ರೆಗಳೇ ಸೂಕ್ತ ಸ್ಥಾನ ಎಂಬ ನಿರ್ಧಾರಕ್ಕೆ ಬಂದಿದ್ದ ಉಗ್ರರು ಆಸ್ಪತ್ರೆಗಳನ್ನು ಗುರಿಯಾಗಿಸಿ ಕೃತ್ಯ ಎಸಗಿದ್ದರು ಎಂಬ ಅಂಶ ತೀರ್ಪಿನಲ್ಲಿ ಉಲ್ಲೇಖವಾಗಿದೆ ಎಂದು ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 164 ಮಂದಿ ಹೇಳಿಕೆ ನೀಡಿದ್ದು, ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ನಿಷೇಧ ಮಾಡಿದ್ದಕ್ಕೆ ಸಾಮೂಹಿಕ ಹತ್ಯೆ ಎಸಗಲು ಸಂಚು ರೂಪಿಸಿದ್ದರು ಎಂದು ವರದಿಯಾಗಿದೆ.