ಉದ್ಯೋಗಿಗಳಿಗೆ ಬೂಸ್ಟರ್ ಡೋಸ್ ಕಡ್ಡಾಯ

ಮಂಗಳವಾರ, 11 ಜನವರಿ 2022 (15:05 IST)
ವಾಷಿಂಗ್ಟನ್ : ಮೆಟಾ ಮಾಲಿಕತ್ವದ ಫೇಸ್ಬುಕ್ ಓಮಿಕ್ರಾನ್ ಭೀತಿಯಿಂದಾಗಿ ತನ್ನ ಉದ್ಯೋಗಿಗಳನ್ನು ಕಂಪನಿಗೆ ಕರೆಸಿಕೊಳ್ಳುವ ಯೋಜನೆಯನ್ನು ವಿಳಂಬ ಮಾಡಿದೆ.

ಮಾತ್ರವಲ್ಲದೇ ಕಂಪನಿಗೆ ಮರಳುವ ಉದ್ಯೋಗಿಗಳಿಗೆ ಬೂಸ್ಟರ್ ಡೋಸ್ ಕಡ್ಡಾಯಗೊಳಿಸದೆ. ಈ ಹಿಂದೆ ಫೇಸ್ಬುಕ್ ಜನವರಿ 31ರ ಒಳಗಾಗಿ ತನ್ನ ಉದ್ಯೋಗಿಗಳನ್ನು ವರ್ಕ್ ಫ್ರಮ್ ಹೋಮ್ ಕೊನೆಗೊಳಿಸಿ ಕಂಪನಿಗೆ ಕರೆಸಿಕೊಳ್ಳುವ ಯೋಜನೆ ಮಾಡಿತ್ತು.

ಆದರೆ ಪ್ರಪಂಚದಾದ್ಯಂತ ಓಮಿಕ್ರಾನ್ ಪ್ರಕರಣಗಳ ಏರಿಕೆಯಿಂದಾಗಿ ಈ ದಿನಾಂಕವನ್ನು ಮಾರ್ಚ್ 28ಕ್ಕೆ ಮುಂದೂಡಿದೆ.
ಉದ್ಯೋಗಿಗಳು ತಾವು ಎಲ್ಲಿ ಕೆಲಸ ಮಾಡಲು ಬಯಸುತ್ತಾರೆ ಎಂಬುದರ ನಿರ್ಧಾರವನ್ನು ಕಂಪನಿಗೆ ತಿಳಿಸಬೇಕು ಎಂದು ಫೇಸ್ಬುಕ್ ಉಪಾಧ್ಯಕ್ಷ ಜಾನೆಲ್ ಗೇಲ್ ತಿಳಿಸಿದ್ದಾರೆ.

ಉದ್ಯೋಗಿಗಳು ತಮಗೆ ಅನುಕೂಲವಾಗುವಂತೆ ಮನೆಯಿಂದ ಅಥವಾ ಕಂಪನಿಯಲ್ಲಿಯೇ ಕೆಲಸ ಮಾಡುವ ಆಯ್ಕೆಯನ್ನು ಫೇಸ್ಬುಕ್ ನೀಡಿದೆ. ತಮ್ಮ ನಿರ್ಧಾರವನ್ನು ಕಂಪನಿಗೆ ತಿಳಿಸಲು ಮಾರ್ಚ್ 14ರವರೆಗೆ ಸಮಯಾವಕಾಶವನ್ನು ನೀಡಿದೆ.

ಉದ್ಯೋಗಿಗಳು ಕಂಪನಿಯನ್ನು ಪ್ರವೇಶಿಸುವುದಾದರೆ ಅವರು ಬೂಸ್ಟರ್ ಡೋಸ್ ಪಡೆದಿರುವ ಪುರಾವೆಯನ್ನು ತೋರಿಸಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ