ಗ್ರಾಹಕರಿಗೆ ಬಿಗ್ ಶಾಕ್ ನೀಡಿದ BSNL

ಶುಕ್ರವಾರ, 3 ಸೆಪ್ಟಂಬರ್ 2021 (13:48 IST)
ದೇಶದಲ್ಲಿ ಮೊಬೈಲ್ ಕಂಪನಿಗಳ ಮಧ್ಯೆ ಹಾಗೂ ಟೆಲಿಕಾಂ ಕಂಪನಿಗಳ ಮಧ್ಯೆ ಬೆಲೆ ಯುದ್ಧ ನಡೆಯುತ್ತಿರುತ್ತದೆ. ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ಕೂಡ ಈ ಸ್ಪರ್ಧೆಯಲ್ಲಿ ಹಿಂದೆ ಬಿದ್ದಿಲ್ಲ. ಬಿಎಸ್ಎನ್ಎಲ್ ಅನೇಕ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಯೋಜನೆಯಲ್ಲಿ ಬದಲಾವಣೆ ಮಾಡ್ತಿರುತ್ತದೆ.

ಬಿಎಸ್ಎನ್ಎಲ್, ತನ್ನ ಪ್ರಿಪೇಯ್ಡ್ ಯೋಜನೆಗಳಲ್ಲಿ ಕೆಲವು ಪ್ರಮುಖ ಬದಲಾವಣೆ ಮಾಡಿದೆ. ಪ್ರಿಪೇಯ್ಡ್ ಪ್ಲಾನ್ ಶುಲ್ಕ ಹೆಚ್ಚಿಸಲು ಬಿಎಸ್ಎನ್ಎಲ್ ಮುಂದಾಗಿದೆ.
ಪೋಸ್ಟ್ ಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಲು ಮುಂದಾಗಿರುವ ಬಿಎಸ್ಎನ್ಎಲ್, 99 ರೂಪಾಯಿ ಪೋಸ್ಟ್ ಪೇಯ್ಡ್ ಯೋಜನೆ ಬಂದ್ ಮಾಡ್ತಿದೆ. ಈಗಾಗಲೇ ಈ ಯೋಜನೆ ಪಡೆದಿರುವ ಗ್ರಾಹಕರಿಗೆ ಸಿಂಧುತ್ವ ಮುಗಿಯುವವರೆಗೆ ಈ ಯೋಜನೆ ಲಾಭ ಸಿಗಲಿದೆ. ಮತ್ತೊಮ್ಮೆ ರಿಚಾರ್ಜ್ ಮಾಡಲು ಸಾಧ್ಯವಿಲ್ಲ.
ಬಿಎಸ್ಎನ್ಎಲ್, ಗ್ರಾಹಕರಿಗೆ ಈ ಬಗ್ಗೆ ಎಸ್ಎಂಎಸ್ ಕಳಿಸುತ್ತಿದೆ. 99 ರೂಪಾಯಿ ಯೋಜನೆ ಸ್ಥಗಿತಗೊಳ್ಳುತ್ತಿದೆ ಎಂದು ಎಸ್ಎಂಎಸ್ ಮೂಲಕ ಮಾಹಿತಿ ನೀಡ್ತಿದೆ. ಸೆಪ್ಟೆಂಬರ್ 1ರ ನಂತ್ರ ಈ ಪ್ಲಾನ್ 199 ರೂಪಾಯಿಗೆ ವರ್ಗವಾಗಲಿದೆ.
99 ರೂಪಾಯಿ ಪ್ಲಾನ್ನಲ್ಲಿ ಗ್ರಾಹಕರು ಅನಿಯಮಿತ ಕರೆ, ಪ್ರತಿದಿನ 100 ಎಸ್ಎಂಎಸ್ ಮತ್ತು 25 ಜಿಬಿ ಇಂಟರ್ನೆಟ್ ಸೌಲಭ್ಯ ಪಡೆಯುತ್ತಿದ್ದರು. ಎಲ್ಲಾ ಸೌಲಭ್ಯ ಈಗ 199ಕ್ಕೆ ಸಿಗಲಿದೆ. ಎರಡೂ ಯೋಜನೆಯಲ್ಲಿ ಒಂದೇ ಲಾಭ ಸಿಗ್ತಿದೆ. ಆದ್ರೆ ಬೆಲೆ ಮಾತ್ರ ಹೆಚ್ಚಾಗಿದ್ದು, 100 ರೂಪಾಯಿ ಹೆಚ್ಚು ಪಾವತಿಸಬೇಕಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ