ಬಜೆಟ್ ಮಂಡನೆ : ಗರಿಗೆದರಿದ ಹಲವು ನಿರೀಕ್ಷೆಗಳು

ಶುಕ್ರವಾರ, 7 ಜುಲೈ 2023 (11:09 IST)
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇಯ ಇಂದು ಬಜೆಟ್ ಮಂಡನೆ ಮಾಡುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿಗರಲ್ಲಿ ಹಲವು ನಿರೀಕ್ಷೆಗಳು ಹುಟ್ಟಿಕೊಂಡಿವೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು `ಬ್ರ್ಯಾಂಡ್ ಬೆಂಗಳೂರು’ ಬಿಲ್ಡ್ ಗೆ ಉತ್ಸುಕತೆ ತೋರಿದ್ದಾರೆ. ಡಿಕೆಶಿ ನಗರಾಭಿವೃದ್ಧಿ ಖಾತೆ ವಹಿಸಿಕೊಂಡಿರೋ ಹಿನ್ನಲೆಯಲ್ಲಿ ಡಿಸಿಎಂ ಹೊಸ ಮೆಟ್ರೋ ಮಾರ್ಗಗಳ ಬಗ್ಗೆ ಉತ್ಸಾಹ ತೋರಿಸಿದ್ದಾರೆ. ಹೀಗಾಗಿ ಮೆಟ್ರೋ ನಿಗಮವು ಮೂರು ಮಾರ್ಗಗಳ ಬಗ್ಗೆ ಬೇಡಿಕೆ ಇಟ್ಟಿದ್ದು, ಹೀಗಾಗಿ ಹೊಸ ಮೆಟ್ರೋ ಮಾರ್ಗವನ್ನು ಸಿಎಂ ಇಂದು ಘೋಷಣೆ ಮಾಡ್ತಾರಾ ಎಂಬ ಕುತೂಹಲ ಹುಟ್ಟಿದೆ.

ವೈಟ್ ಫೀಲ್ಡ್ – ಹೊಸಕೋಟೆ 17 ಕಿ.ಮೀ ಮೆಟ್ರೋ ಮಾರ್ಗ, ಒಳ ವರ್ತುಲ ರಸ್ತೆಯಲ್ಲಿ 35 ಕಿ.ಮೀ ಮೆಟ್ರೋ ಮಾರ್ಗ ಹಾಗೂ ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಕಾಡುಗೋಡಿ ವರೆಗೆ 25 ಕಿ.ಮೀ ಮಾರ್ಗ ವಿಸ್ತರಣೆ ಮಾಡುವ ನಿರೀಕ್ಷೆ ಇದೆ.

ಬೆಂಗಳೂರು ನಗರಕ್ಕೆ ಹೊಸ ಫ್ಲೈಓವರ್ ಗಳ ನಿರೀಕ್ಷೆಯೂ ಇದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಹೊಸ ಫ್ಲೈಓವರ್ ಘೋಷಣೆ ಮಾಡುವ ಸಾಧ್ಯತೆಗಳಿವೆ. ಈ ಹಿಂದಿನ ಸರ್ಕಾರ 17 ಹೊಸ ಫ್ಲೈಓವರ್ ಒಪ್ಪಿಗೆ ಸೂಚಿಸಿತ್ತು. ಹೀಗಾಗಿ ಇಂದಿನ ಬಜೆಟ್ನಲ್ಲಿ ಈ ಬಗ್ಗೆ ಘೋಷಣೆ ಆಗೋ ಸಾಧ್ಯತೆ ಹೆಚ್ಚಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ