ಪ್ರಯಾಣಿಕರಿಗೆ ಬಂಪರ್ ಸುದ್ದಿ!

ಸೋಮವಾರ, 15 ನವೆಂಬರ್ 2021 (15:48 IST)
ಕೋವಿಡ್ ಪ್ರೇರಿತ ಬಿಕ್ಕಟ್ಟಿನಿಂದಾಗಿ ಈ ಮಾರ್ಗದಲ್ಲಿ ಪ್ರಯಾಣ ದರವನ್ನು ಹೆಚ್ಚಿಸಿದ್ದ ಸೌತ್ ವೆಸ್ಟರ್ನ್ ರೈಲ್ವೇ ಈಗ ಟಿಕೆಟ್ ದರವನ್ನು ಇಳಿಸಲು ನಿರ್ಧರಿಸಿದೆ.
ಇನ್ಮುಂದೆ ಬೆಂಗಳೂರು-ಮೈಸೂರು ನಡುವೆ ಪ್ರತಿದಿನ 42 ರೈಲುಗಳು ಸಂಚರಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ ವೇಳೆ ಏಕಾಏಕಿ ಏರಿಕೆಯಾಗಿದ್ದ ಟಿಕೆಟ್ ದರಗಳು ಪ್ರಯಾಣಿಕರಿಗೆ ದುಬಾರಿಯಾಗಿದ್ದವು. ವಿಶೇಷ ರೈಲುಗಳು ಮತ್ತು ಹಬ್ಬದ ಋತುವಿನಲ್ಲಿ SWR ನಿಂದ ಪ್ರಯಾಣಿಸಲು 145 ರೂಪಾಯಿಯಿಂದ 385 ರೂ .ವರೆಗೆ ಹಣ ನೀಡಬೇಕಾಗಿತ್ತು. ಆದರೆ ಈಗ ಪ್ರಯಾಣಿಕರು ಬೆಂಗಳೂರು-ಮೈಸೂರು ರೈಲಿನಲ್ಲಿ ಕಾಯ್ದಿರಿಸದ ಟಿಕೆಟನ್ನು ಕೇವಲ 65 ರೂ.ಗೆ ಖರೀದಿಸಬಹುದು.
ಕೇವಲ ಟಿಕೆಟ್ ದರಗಳ ಕಡಿತ ಮಾತ್ರವಲ್ಲ ಮತ್ತೊಂದು ಸುದ್ದಿಯೂ ಪ್ರಯಾಣಿಕರಿಗೆ ಸಂತಸ ತಂದಿದೆ. ಸಾಂಕ್ರಾಮಿಕ ರೋಗದ ಮೊದಲು ಇದ್ದಂತೆ, SWR ಎರಡು ನಗರಗಳ ನಡುವೆ ಪ್ರತಿದಿನ ಸಂಚರಿಸುತ್ತಿದ್ದ ಎಲ್ಲಾ 51 ರೈಲುಗಳ ಕಾರ್ಯಾಚರಣೆಯನ್ನು ಪುನರಾರಂಭಿಸಲು ನಿರ್ಧರಿಸಿದ್ದಾರೆ.
ಪ್ರಯಾಣಿಕರು ಈ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಎರಡು ನಗರಗಳ ನಡುವೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರೈಲುಗಳ ವಿವರಗಳನ್ನು ಒಳಗೊಂಡ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎಂದು ಬೆಂಗಳೂರು-ಮೈಸೂರು ರೈಲುಗಳ ಸಾಮಾನ್ಯ ಪ್ರಯಾಣಿಕರು ಮನವಿ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ