ಬಿಡಬ್ಲ್ಯುಎಫ್ ಗೌರವ: ಪಿ. ವಿ ಸಿಂಧುಗೆ ಮತ್ತೊಂದು ಗರಿ

ಮಂಗಳವಾರ, 21 ಡಿಸೆಂಬರ್ 2021 (08:39 IST)
ನವದೆಹಲಿ : 2 ಬಾರಿ ಒಲಿಂಪಿಕ್ಸ್ ಪದಕವನ್ನು ಗೆದ್ದು ಹೆಮ್ಮೆಗೆ ಪಾತ್ರವಾದ ಪಿ.ವಿ ಸಿಂಧು ಅವರಿಗೆ ಬ್ಯಾವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್( ಬಿಡಬ್ಲ್ಯುಎಫ್) ವಿಶೇಷ ಗೌರವ ನೀಡಿದೆ.

ಬಿಡಬ್ಲ್ಯುಎಫ್ ಅಥ್ಲೀಟ್ ಕಮಿಷನ್ನ ಸದಸ್ಯೆಯನ್ನಾಗಿ ನೇಮಿಸಿದೆ. ಬಿಡಬ್ಲ್ಯುಎಫ್ ಒಟ್ಟು 6 ಮಂದಿಗೆ ಈ ಗೌರವ ಸಲ್ಲಿಸಿದೆ. ಮಾಜಿ ವಿಶ್ವ ಚಾಂಪಿಯನ್, 26 ವರ್ಷದ ಸಿಂಧು ಸೇರಿ ಆರು ಮಂದಿ ಆಯೋಗಕ್ಕೆ ನೇಮಕವಾಗಿದ್ದು, 2025ರವರೆಗೆ ಇವರ ಅಧಿಕಾರಾವಧಿ ಇರಲಿದೆ.

2021-2025ರ ಅವಧಿಗೆ ಅಥ್ಲೀಟ್ಗಳ ಆಯೋಗಕ್ಕೆ ಐರಿಸ್ ವಾಂಗ್ (ಅಮೆರಿಕ), ರಾಬಿನ್ ಟೇಬೆಲಿಂಗ್ (ನೆದಲೆರ್ಂಡ್ಸ್), ಗ್ರೇಸಿಯಾ ಪೋಲಿ (ಇಂಡೊನೇಷ್ಯಾ), ಕಿಮ್ ಸೊಯೊಂಗ್ (ಕೊರಿಯಾ), ಪಿ.ವಿ. ಸಿಂಧು (ಭಾರತ), ಜೆಂಗ್ ಸಿ ವೇ (ಚೀನಾ) ಅವರನ್ನು ನೇಮಿಸಲಾಗಿದೆ ಎಂದು ಬಿಡಬ್ಲ್ಯುಎಫ್ ಹೇಳಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ