ಓಟದ ರಾಣಿ ಪಿ.ಟಿ. ಉಷಾ ವಿರುದ್ಧ ವಂಚನೆ ಕೇಸ್ ದಾಖಲು

ಸೋಮವಾರ, 20 ಡಿಸೆಂಬರ್ 2021 (10:01 IST)
ತಿರುವನಂತರಪುರಂ: ಖ್ಯಾತ ಅಥ್ಲಿಟ್ ಪಿ.ಟಿ ಉಷಾ ವಿರುದ್ಧ ಕೇರಳದ ಕೋಝಿಕ್ಕೋಡ್ ನಲ್ಲಿ ವಂಚನೆ ಪ್ರಕರಣವೊಂದು ದಾಖಲಾಗಿದೆ.

ಮಾಜಿ ಅಥ್ಲಿಟ್ ಜೆಮ್ಮಾ ಜೋಸೆಫ್ ನೀಡಿದ ದೂರಿನನ್ವಯ ಪಿ.ಟಿ. ಉಷಾ ಮತ್ತು ಆರು ಮಂದಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಹೊಸ ಅಪಾರ್ಟ್ ಮೆಂಟ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಪಿ.ಟಿ ಉಷಾ ಖಾತರಿಯಲ್ಲಿ ಜೆಮ್ಮಾ ಜೋಸೆಫ್ 46 ಲಕ್ಷ ರೂ.ಗಳನ್ನು ನೀಡಿದ್ದರು.

ಆದರೆ ನಿಗದಿತ ಸಮಯದಲ್ಲಿ ಕಟ್ಟಡ ಕಾಮಗಾರಿ ಪೂರ್ತಿ ಮಾಡದೆ ವಂಚನೆ ಮಾಡಲಾಗಿದೆ ಎಂದು ಉಷಾ ಮತ್ತು ಇತರರ ವಿರುದ್ಧ ದೂರು ನೀಡಲಾಗಿದೆ. ಹಣ ಪಾವತಿಸಿದರೂ ಅಪಾರ್ಟ್ ಮೆಂಟ್ ನ್ನು ಜೊಸೆಫ್ ಹೆಸರಿಗೆ ಬರೆದುಕೊಟ್ಟಿಲ್ಲ ಎನ್ನುವುದು ಆರೋಪ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ