ಪೋಷಕರು ಬದುಕಿರುವಾಗ ಮಕ್ಕಳು ಆಸ್ತಿ ಲಾಭ ಪಡೆಯಲು ಸಾಧ್ಯವಿಲ್ಲ : ಹೈಕೋರ್ಟ್

ಸೋಮವಾರ, 21 ಮಾರ್ಚ್ 2022 (09:34 IST)
ಮುಂಬೈ : ಪೋಷಕರು ಬದುಕಿರುವಾಗಲೇ ಅವರ ಒಡೆತನದ ಆಸ್ತಿಯ ಮೇಲೆ ಮಗ ಹಕ್ಕು ಸಾಧಿಸಲು ಅಥವಾ ಲಾಭಾಂಶ ಪಡೆಯಲು ಸಾಧ್ಯವಿಲ್ಲ ಎಂದು ಬಾಂಬೆ ತೀರ್ಪು ನೀಡಿದೆ.

ಸೋನಿಯಾ ಖಾನ್ ಎಂಬವರು ದೀರ್ಘ ಕಾಲದಿಂದ ಹಾಸಿಗೆ ಹಿಡಿದಿರುವ ತನ್ನ ಪತಿಯ ಒಡೆತನದ ಎಲ್ಲ ಆಸ್ತಿಗಳಿಗೆ ಅವರನ್ನು ಕಾನೂನುಬದ್ಧ ಹಕ್ಕುದಾರ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ. 

ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿದ್ದ ಅವರ ಮಗ ಆಸಿಫ್ ಖಾನ್ ತಾನು ತನ್ನ ತಂದೆಯ ವಾಸ್ತವಿಕ ರಕ್ಷಕ ಎಂದು ಹೇಳಿಕೊಂಡಿದ್ದರು. ಪೋಷಕರು ಜೀವಂತವಾಗಿ ಇದ್ದರೂ ಅವರ ಆಸ್ತಿಯನ್ನು ಹಂಚಿಕೊಂಡು (ಎರಡು ಫ್ಲಾಟ್) ಹಂಚಿಕೊಂಡು ಕಾನೂನುಬದ್ಧ ಹಕ್ಕು ಇದೆ ಎಂದು ಅವರು ವಾದಿಸಿದ್ದರು.

ಆದರೆ ಈ ವಾದ ಆಧಾರ ರಹಿತ ಮತ್ತು ಅತಾರ್ಕಿಕ ಎಂದು ನ್ಯಾಯಮೂರ್ತಿ ಗೌತಮ್ ಪಟೇಲ್ ಮತ್ತು ಮಾಧವ್ ಜಾಮದಾರ್ ಅವರಿದ್ದ ಪೀಠ ತಿಳಿಸಿತು.

ಉತ್ತರಾಧಿಕಾರದ ಕಾನೂನಿನ ಅಡಿಯಲ್ಲಿ ಪೋಷಕರು ಜೀವಂತವಾಗಿರುವವರೆಗೆ ಪೋಷಕರ ಆಸ್ತಿಯಲ್ಲಿ ಹಕ್ಕು ಅಥವಾ ಒಡೆತನ ಪಡೆಯಲು ಯಾವುದೇ ಸಮುದಾಯಕ್ಕೆ ಸೇರಿದ ಮಗನಿಗೂ ಅವಕಾಶವಿಲ್ಲವೆಂದು ಅವರು ಸ್ಪಷ್ಟಪಡಿಸಿದರು.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ