ಬಟ್ಟೆ ತೆಗೆದರೆ ಅತ್ಯಾಚಾರ ಎನ್ನಲಾಗುವುದಿಲ್ಲ: ಹೈಕೋರ್ಟ್

ಗುರುವಾರ, 17 ಮಾರ್ಚ್ 2022 (13:51 IST)
ಶಿಲ್ಲಾಂಗ್ : ಬಟ್ಟೆ ತೆಗೆದರೆ ಮಾತ್ರ ಅತ್ಯಾಚಾರ ಎನ್ನಲು ಸಾಧ್ಯವಿಲ್ಲ. ಒಳ ಉಡುಗಳಿದ್ದಾಗಲೂ ಎಸಗುವ ಲೈಂಗಿಕ ದೌರ್ಜನ್ಯ ಅತ್ಯಾಚಾರಕ್ಕೆ ಸಮ ಎಂದು ಮೇಘಾಲಯ ಹೈಕೋರ್ಟ್ ಹೇಳಿದೆ.

ಲೈಂಗಿಕ ದೌರ್ಜನ್ಯ ಪ್ರಕರಣವೊಂದರ ವಿಚಾರಣೆ ನಡೆಸಿ ನ್ಯಾಯಾಲಯ, ಅಪರಾಧಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 (ಬಿ) ಅಡಿಯಲ್ಲಿ ಆರೋಪ ಹೊರಿಸಲಾಗುವುದು ಎಂದು ತಿಳಿಸಿದೆ.

10 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಡಬ್ಲ್ಯೂ.ಡಿಯೆಂಗ್ಡೊ ಅವರ ವಿಭಾಗೀಯ ಪೀಠವು, ಅಪರಾಧಿಗೆ ಶಿಕ್ಷೆ ವಿಧಿಸಿದ್ದ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.

ಈ ಘಟನೆಯು 2006ರ ಸೆಪ್ಟೆಂಬರ್ 23ರಂದು ನಡೆದಿದೆ. ಒಂದು ವಾರದ ನಂತರ ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಬಾಲಕಿಯ ಖಾಸಗಿ ಭಾಗಗಳಲ್ಲಿ ನೋವು ಕಾಣಿಸಿಕೊಂಡಿತ್ತು. ತಾನು ಆಕೆಯ ಒಳ ಉಡುಪುಗಳನ್ನು ತೆಗೆದಿಲ್ಲ ಎಂದು ಆರೋಪಿ ಹೇಳಿದರೂ, ಲೈಂಗಿಕ ದೌರ್ಜನ್ಯಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ