ಚೀನಾ : ಕೊರೊನಾ ದೈನಂದಿನ ಪ್ರಕರಣಗಳ ಸಂಖ್ಯೆ ಪ್ರಕಟಿಸದಿರಲು ನಿರ್ಧಾರ?

ಮಂಗಳವಾರ, 27 ಡಿಸೆಂಬರ್ 2022 (08:33 IST)
ಬೀಜಿಂಗ್ :  ಆಸ್ಪತ್ರೆ ಸೇರೋಣ ಅಂದ್ರೆ ಬೆಡ್ ಇಲ್ಲ. ಐಸಿಯುಗೆ ಅಡ್ಮಿಟ್ ಆಗ್ಬೇಕು ಅಂದ್ರೆ ಆಕ್ಸಿಜನ್ ಇಲ್ಲ. ಕೊನೆಗೆ ಸತ್ರು ಅಂತಾ ಇಟ್ಕೊಳಿ ಮಾರ್ಚುರಿಗಳು ಕೂಡ ಖಾಲಿ ಇಲ್ಲ.

ಇದು ಕೋವಿಡ್ನಿಂದ ತತ್ತರಿಸಿರುವ ಚೀನಾದಲ್ಲಿ ಕಂಡುಬಂದಿರೋ ಪರಿಸ್ಥಿತಿ. ಚೀನಾದ ಶೇಕಡಾ 18ರಷ್ಟು ಮಂದಿಗೆ ಎರಡು ವಾರಗಳಲ್ಲಿ ಸೋಂಕು ತಗುಲಿದೆ.

ಆದರೆ ಚೀನಾ ಮಾತ್ರ ಈ ಅವಧಿಯಲ್ಲಿ ಬಂದಿರೋ ಕೇಸ್ 62 ಸಾವಿರವಷ್ಟೇ ಅಂದಿದೆ. ಅಲ್ದೇ, ಕೇವಲ ಒಂದು ಸಾವಾಗಿದ್ಯಂತೆ.

ಅಂದ ಹಾಗೇ, ಇನ್ಮುಂದೆ ಕೋವಿಡ್ ಅಂಕಿ ಸಂಖ್ಯೆ ನೀಡದಿರಲು ಚೀನಾ ಸರ್ಕಾರ ನಿರ್ಧರಿಸಿದೆ. ಆದರೆ ಜಗತ್ತಿಗೆ ಚೀನಾದ ಕೊರೊನಾ ಸಾವು ನೋವು ಜಗಜ್ಜಾಹಿರಾಗಿದೆ. ಕೋಟಿಗಟ್ಟಲೇ ಕೋವಿಡ್ ಕೇಸ್ ದಾಖಲಾಗುತ್ತಿರುವುದರಿಂದ ಚೀನಾ ಕಂಗೆಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ