ಜನಸಂಖ್ಯೆಯಲ್ಲಿ ಚೀನಾ ಮೀರಿಸುತ್ತೆ ಭಾರತ!

ಬುಧವಾರ, 23 ನವೆಂಬರ್ 2022 (11:10 IST)
ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ ಮೊದಲ ಹಾಗೂ ಭಾರತ ಎರಡನೇ ಸ್ಥಾನದಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ಆದರೆ ಈ ಬಾರಿ ವಿಶ್ವ ಜನಸಂಖ್ಯಾ ದಿನದಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿದ ʼವಿಶ್ವ ಜನಸಂಖ್ಯಾ ಪ್ರಾಸ್ಪೆಕ್ಟ್ʼ ವರದಿಯಲ್ಲಿ ಅಚ್ಚರಿದಾಯಕ ಅಂಶವೊಂದು ಹೊರಬಿದ್ದಿದೆ. ಮುಂದಿನ ವರ್ಷಕ್ಕೆ ಭಾರತದ ಜನಸಂಖ್ಯೆ ಚೀನಾವನ್ನೂ ಮೀರಿಸಲಿದೆ ಎಂದು ಹೇಳಿದೆ.

ಚೀನಾ ಮತ್ತು ಭಾರತ ದೇಶಗಳ ಜನಸಂಖ್ಯೆಯಲ್ಲಿ ಈ ರೀತಿಯ ಬದಲಾವಣೆಗೆ ಪ್ರಮುಖ ಕಾರಣವೇನು? ಮುಂದೆ ಅದರ ಪರಿಣಾಮಗಳೇನು ಎಂಬುದನ್ನು ನಾವಿಲ್ಲಿ ತಿಳಿಯಬಹುದು.

2022 ರಲ್ಲಿ ಚೀನಾ ಮೊದಲ ಬಾರಿಗೆ ತನ್ನ ಜನಸಂಖ್ಯೆಯಲ್ಲಿ ಸಂಪೂರ್ಣ ಕುಸಿತವನ್ನು ದಾಖಲಿಸಿದೆ. 2023 ರಲ್ಲಿ 1,428.63 ಮಿಲಿಯನ್ ತಲುಪುವ ಭಾರತದ ಜನಸಂಖ್ಯೆಯು ಚೀನಾದ 1,425.67 ಮಿಲಿಯನ್ ಜನಸಂಖ್ಯೆಯನ್ನು ಮೀರಿಸುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ. ಸಂಭಾವ್ಯ ಆರ್ಥಿಕ ಪರಿಣಾಮಗಳು ದೊಡ್ಡದಾಗಿದೆ. ಇದರ ಮಧ್ಯೆ, ಇಂತಹ ಬದಲಾವಣೆಗೆ ಪ್ರಮುಖ ಕಾರಣಗಳೇನು?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ