ನಂಗೆ ಹೃದಯ ಶಸ್ತ್ರಚಿಕಿತ್ಸೆಯಾಗಿದೆ, ಆದರೂ ಎಲ್ಲಾ ತಡ್ಕೊಂಡಿದ್ದೇನೆ: ಮತ್ತೆ ಸಿಎಂ ಭಾವನಾತ್ಮಕ ಅಸ್ತ್ರ
ಈ ನಡುವೆ ಸಿಎಂ ಕುಮಾರಸ್ವಾಮಿ ಉದಯಪುರದಲ್ಲಿ ಬಿಜೆಪಿ ವಿರುದ್ಧ ಜನ ದಂಗೆ ಏಳುವಂತೆ ಮಾಡುತ್ತೇನೆ ಎನ್ನುವ ಮಾತು ಭಾರೀ ವಿವಾದಕ್ಕೆ ಕಾರಣವಾಗಿದೆ. ಅದರ ಜತೆಗೆ ಬಿಜೆಪಿ ನಾಯಕರು ಜೆಡಿಎಸ್ ವಿರುದ್ಧ ಹಗರಣಗಳನ್ನು ಹೊರಗೆ ಎಳೆದುತರುವುದಾಗಿ ಬಾಂಬ್ ಹಾಕಿದ್ದಾರೆ. ಆದರೆ ಇದು ಠುಸ್ ಪಟಾಕಿ ಆಗಿರುವುದಂತೂ ನಿಜ.
ಹಾಗಿದ್ದರೂ ರಾಜಕೀಯದ ಈ ಕೆಸರೆರಚಾಟದಿಂದಾಗಿ ನಾನು ಹೈರಾಣಾಗಿದ್ದೇನೆ. ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಯಾಗಿದೆ. ಆದರೂ ಇದನ್ನೆಲ್ಲಾ ತಡ್ಕೊಂಡಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಭಾವನಾತ್ಮಕ ಅಸ್ತ್ರ ಬಿಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅವರು ಈ ರೀತಿ ಭಾವುಕರಾಗಿ ಹೇಳಿಕೊಂಡಿದ್ದಾರೆ.