ಬೆಂಗಳೂರು : ಆಜಾದಿ ಕಾ ಅಮೃತಮಹೋತ್ಸವಕ್ಕೆ ಎಲ್ಲಾ ಕಡೆ ಭರ್ಜರಿ ತಯಾರಿಗಳು ನಡೀತಿವೆ.
ರಾಜ್ಯ ಸರ್ಕಾರ ಹರ್ ಘರ್ ತಿರಂಗ ಅಭಿಯಾನಕ್ಕೆ ಹೆಚ್ಚು ಒತ್ತು ಕೊಟ್ಟಿದೆ. ಅಭಿಯಾನ ಯಶಸ್ವಿಗೊಳಿಸುವಂತೆ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಿಗೆ ಸಿಎಂ ಪತ್ರ ಬರೆದಿದ್ದಾರೆ.
ಎಲ್ಲರ ಮನೆಯ ಮೇಲೆ ತಿರಂಗಾ ಹಾರಿಸುವಂತೆ ಮನವಿ ಮಾಡಿದ್ದಾರೆ. ಆದರೆ ಹರ್ ಘರ್ ತಿರಂಗಾ ಅಭಿಯಾನವನ್ನು ಬಿಜೆಪಿಯ ನಾಟಕ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಜರಿದಿದ್ದಾರೆ.
ಮೊದಲು ಧ್ವಜದ ಬಣ್ಣ ಕೆಂಪು ಇತ್ತು, ಅದಕ್ಕೆ ಕೇಸರಿ ಬದಲು ಕೆಂಪು ಅಂತಾ ಹೇಳಿದ್ದೇ. ಅದೇನು ದೊಡ್ಡ ಅಪರಾಧನಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಧ್ವಜ ಖರೀದಿಗೆ ತಾಲೂಕು ಕಚೇರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ದೋಷಯುಕ್ತ ಧ್ವಜಗಳನ್ನು ಜನರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. ತಮ್ಮ ಆರೋಪಕ್ಕೆ ಪೂರಕವಾಗಿ ಹೊಳೆನರಸೀಪುರದಲ್ಲಿ ಮಾರಾಟ ಮಾಡಲಾಗಿರುವ ದೋಷಯುಕ್ತ ಧ್ವಜದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.