ಚುನಾವಣೆಗೂ ಮೊದಲು ಮಾಸ್ಟರ್ ಪ್ಲ್ಯಾನ್ ಮಾಡಲು ಸಿಎಂ ಸಿದ್ದರಾಮಯ್ಯ ತೆರಳಿದ್ದು ಎಲ್ಲಿಗೆ ಗೊತ್ತಾ?
ನಾಲ್ಕು ದಿನಗಳ ಕಾಲ ಬಂಡೀಪುರದ ರೆಸಾರ್ಟ್ ಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ ವಿಶ್ರಾಂತಿ ಜತೆಗೆ ತಮ್ಮ ಆಪ್ತ ನಾಯಕರ ಜತೆಗೆ ಚುನಾವಣೆ ಕಾರ್ಯತಂತ್ರಗಳ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಚುನಾವಣೆಗೆ ಹಣಕಾಸಿನ ವಿಚಾರ, ಖರ್ಚು ವೆಚ್ಚದ ವಿವರಗಳನ್ನು, ಟಿಕೆಟ್ ಫೈನಲ್ ಮಾಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮ್ಮ ಕೆಲವೇ ಕೆಲವು ಆಪ್ತ ನಾಯಕರ ಜತೆಗೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಬಂಡೀಪುರದಲ್ಲಿರುವ ಸಿಎಂ ವಾಸ್ತವ್ಯವಿರುವ ರೆಸಾರ್ಟ್ ಗೆ ಅವರನ್ನು ಭೇಟಿ ಮಾಡಲು ಅವರು ಆಯ್ದ ನಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.