ಜೆಡಿಎಸ್-ಕಾಂಗ್ರೆಸ್ ಲೋಕಸಭೆ ಮೈತ್ರಿಗೆ ಆರಂಭದಲ್ಲೇ ವಿಘ್ನ!

ಬುಧವಾರ, 20 ಜೂನ್ 2018 (08:57 IST)
ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿರುವ ಹುಮ್ಮಸ್ಸಿನಲ್ಲಿರುವ ಜೆಡಿಎಸ್-ಕಾಂಗ್ರೆಸ್ ಲೋಕಸಭೆಗೂ ಇದೇ ಮೈತ್ರಿ ಮುಂದುವರಿಸುವ ಚಿಂತನೆಯಲ್ಲಿರುವಾಗಲೇ ಅಪಸ್ವರ ಕೇಳಿಬಂದಿದೆ.

ರಾಜ್ಯ ಕಾಂಗ್ರೆಸ್ ನಾಯಕರು ಇಂದು ದೆಹಲಿಗೆ ತೆರಳಿ ಅಧ್ಯಕ್ಷ ರಾಹುಲ್ ಗಾಂಧಿಗೆ ಹುಟ್ಟುಹಬ್ಬದ ಶುಭಾಷಯ ಕೋರುವುದರ ಜತೆಗೆ ತಮ್ಮ ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಲೋಕಸಭೆಗೆ ಮೈತ್ರಿ ಮುಂದುವರಿಸುವಾಗ ಜೆಡಿಎಸ್ ಪ್ರಮುಖ ಕ್ಷೇತ್ರಗಳನ್ನು ಬಿಟ್ಟುಕೊಡಲು ಕೇಳುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಅವರು ಕೇಳಿದ್ದೆಲ್ಲಾ ಕೊಡಬೇಡಿ ಎಂದು ಹೈಕಮಾಂಡ್ ಮುಂದೆ ರಾಜ್ಯ ನಾಯಕರು ಒತ್ತಡ ಹೇರಿದ್ದಾರೆಎನ್ನಲಾಗಿದೆ.

ಇನ್ನೊಂದೆಡೆ ರಾಹುಲ್ ಗಾಂಧಿ ತಮಗಿಂತ ಹೆಚ್ಚು ಕುಮಾರಸ್ವಾಮಿ ಮಾತುಗಳಿಗೆ ಹೆಚ್ಚು ಮನ್ನಣೆ ನೀಡುತ್ತಿರುವುದು ರಾಜ್ಯ ನಾಯಕರಲ್ಲಿ ಅಸಮಾಧಾನ ಉಂಟುಮಾಡಿದೆ ಎನ್ನಲಾಗಿದೆ. ಅಂತೂ ಲೋಕಸಭೆಗೆ ಮೈತ್ರಿ ಮಾಡುವ ಮೊದಲೇ ಜೆಡಿಎಸ್-ಕಾಂಗ್ರೆಸ್ ನಲ್ಲಿ ಭಿನ್ನರಾಗ ಶುರುವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ