ಸಿದ್ಧರಾಮಯ್ಯ ವಿರುದ್ಧ ರಾಹುಲ್ ಗಾಂಧಿಗೆ ದೂರಿದ ಸಿಎಂ ಎಚ್ ಡಿಕೆ

ಮಂಗಳವಾರ, 19 ಜೂನ್ 2018 (08:53 IST)
ನವದೆಹಲಿ: ಬಜೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ಸಿಎಂ ಎಚ್ ಡಿಕೆ ನಡುವಿನ ವೈಮನಸ್ಯ ದೆಹಲಿ ಕಾಂಗ್ರೆಸ್ ಹೈಕಮಾಂಡ್ ಮೆಟ್ಟಿಲೇರಿದೆ.

ಸಿದ್ದರಾಮಯ್ಯ ಸಮನ್ವಯ ಸಮಿತಿ ಸಭೆಯಲ್ಲಿ ಸಿಎಂ ಕುಮಾರಸ್ವಾಮಿಗೆ ಪೂರ್ಣ ಪ್ರಮಾಣದ ಬಜೆಟ್ ಮಾಡುವ ಅಗತ್ಯವಿಲ್ಲ ಎಂದಿದ್ದರು. ಇದು ಇಬ್ಬರು ನಾಯಕರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು.

ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೇಟಿ ಮಾಡುವಾಗ ಸಿಎಂ ಎಚ್ ಡಿಕೆ ಈ ವಿಚಾರದ ಬಗ್ಗೆ ವಿಶೇಷವಾಗಿ ಪ್ರಸ್ತಾಪವಿಟ್ಟಿದ್ದಾರೆ. ನೀವು ಸಮ್ಮಿಶ್ರ ಸರ್ಕಾರ ರಚನೆ ವೇಳೆ ಬೇಷರತ್ ಬೆಂಬಲ ಎಂದಿದ್ದಿರಿ. ಆದರೆ ಈಗ ಸಿದ್ದರಾಮಯ್ಯ ಬಜೆಟ್ ಬೇಡ ಎನ್ನುತ್ತಿದ್ದಾರೆ. ಯಾವುದೇ ಹೊಸ ಸರ್ಕಾರಕ್ಕೂ ಬಜೆಟ್ ಎನ್ನುವುದು ಮುಖ್ಯ ವಿಚಾರ. ಅದನ್ನೇ ಬೇಡ ಎಂದರೆ ಹೇಗೆ ಎಂದು ಕುಮಾರಸ್ವಾಮಿ ರಾಹುಲ್ ಬಳಿ ಹೇಳಿಕೊಂಡಿದ್ದಾರೆ.

ಇದಕ್ಕೆ ರಾಹುಲ್ ಗಾಂಧಿ, ಸಮಾಧಾನದಿಂದಲೇ ಉತ್ತರಿಸಿದ್ದು, ಬಜೆಟ್ ವಿಚಾರದಲ್ಲಿ ಸಿದ್ದರಾಮಯ್ಯ ಸಲಹೆ ಅಗತ್ಯವಿಲ್ಲ. ನೀವು ಬಜೆಟ್ ಮಂಡಿಸಿ ಎಂದು ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ