ಸಿದ್ದರಾಮಯ್ಯ ಕಟ್ಟಿ ಹಾಕಲು ಕೆಪಿಸಿಸಿಯಲ್ಲಿ ಇಂದು ಪ್ಲ್ಯಾನ್!
ಡಿಸಿಎಂ ಡಾ ಜಿ ಪರಮೇಶ್ವರ್, ಸಚಿವ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು, ಕಾಂಗ್ರೆಸ್ ಸಚಿವರೆಲ್ಲರೂ ಪಾಲ್ಗೊಳ್ಳಲಿದ್ದಾರೆ. ಸಿದ್ದರಾಮಯ್ಯ ಹೇಳಿಕೆಗಳಿಂದಾಗಿ ಸರ್ಕಾರಕ್ಕೆ ಭಂಗವಾದೇ ಇರಲು ಈ ಸಭೆಯಲ್ಲಿ ಯೋಜನೆ ರೂಪಿಸಲಾಗುವುದು ಎನ್ನಲಾಗಿದೆ.
ನಿನ್ನೆ ಧರ್ಮಸ್ಥಳದಲ್ಲಿರುವ ಸಿದ್ದರಾಮಯ್ಯ ಭೇಟಿಗೆ 18 ಜನ ಶಾಸಕರು ತೆರಳಿದ ಮೇಲೆ ಕೆಪಿಸಿಸಿ ಎಚ್ಚೆತ್ತುಕೊಂಡಿದ್ದು, ಸರ್ಕಾರಕ್ಕೆ ಯಾವುದೇ ಪರಿಣಾಮವಾಗದಂತೆ ಮಾಡಲು ಯೋಜನೆ ರೂಪಿಸಿದೆ.