30 ಸಾವಿರ ರೂ. ಕೊಟ್ಟು ಪಿಜ್ಜಾ ತಿನ್ನುವರಿಗೇ ಏನು ಗೊತ್ತಾಗುತ್ತೆ? ಕೇಂದ್ರ ಸಚಿವರು ಹೀಗೆ ಹೇಳಿದ್ದೇಕೆ?
ನನ್ನ ಇಲಾಖೆಯಲ್ಲಿ 12 ಸಾವಿರ ರೂ. ವೇತನ ಸಿಗುವಂತಹ ಉದ್ಯೋಗ ಸೃಷ್ಟಿಯಾಗಿದೆ. ಉದ್ಯೋಗ ಸೃಷ್ಟಿಯಾಗಿಲ್ಲ ಎನ್ನುವವರಿಗೆ ನಾನು ಈ ಮೂಲಕ ಉತ್ತರ ಕೊಡುತ್ತಿದ್ದೇನೆ. ಬಡತನವೆಂದರೆ ಏನೆಂದೇ ಗೊತ್ತಿಲ್ಲದವರು ಹೀಗೆಲ್ಲಾ ಹೇಳಬಹುದು ಎಂದು ಸಚಿವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
30 ಸಾವಿರ ರೂ. ಕೊಟ್ಟು ಪಿಜ್ಜಾ ತಿನ್ನುವವರಿಗೆ 12 ಸಾವಿರ ರೂ. ಲೆಕ್ಕವೇ ಅಲ್ಲದಿರಬಹುದು ಎಂದು ಟಾಂಗ್ ನೀಡಿರುವ ಸಚಿವ ಗಿರಿರಾಜ್ ಸಿಂಗ್, ತನ್ನ ಇಲಾಖೆಯಲ್ಲಿ 10 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಯಾಗಿದೆ ಎಂದಿದ್ದಾರೆ.