ವಿಶ್ವಕ್ಕೆ ಮತ್ತೆ ಕೊರೊನಾ ಕಿರಿಕಿರಿ!

ಬುಧವಾರ, 5 ಜನವರಿ 2022 (07:40 IST)
ನವದೆಹಲಿ : ಕೊರೊನಾ ವಿಶ್ವವ್ಯಾಪಿ ಮತ್ತೆ ಸದ್ದು ಮಾಡುತ್ತಿದೆ. ಕೋವಿಡ್-19 ಹೊಸ ವಿಶ್ವ ದಾಖಲೆ ಬರೆದಿದೆ.

ಒಂದೇ ದಿನ 20 ಲಕ್ಷಕ್ಕೂ ಹೆಚ್ಚು ಪ್ರಕರಣ ವರದಿ ಆಗಿದೆ. ಇದರಲ್ಲಿ ಅರ್ಧ ಪಾಲು ಕೇವಲ ಅಮೆರಿಕಾದಿಂದಲೇ ವರದಿ ಆಗಿದೆ.

ನಿನ್ನೆ ದಿನ ಅಮೆರಿಕಾದಲ್ಲಿ ಬರೋಬ್ಬರಿ 10.42 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದೆ. ಕಳೆದ ಗುರುವಾರ 5.91 ಲಕ್ಷ ಕೇಸ್ ವರದಿ ಆಗಿತ್ತು. ಕೇವಲ ನಾಲ್ಕು ದಿನದಲ್ಲಿ ಇದು ದುಪ್ಪಟ್ಟಾಗಿದೆ. ಪ್ರತಿ ಆರು ಮಂದಿಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಅಮೆರಿಕಾದ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿದೆ.

ಸದ್ಯ 1 ಲಕ್ಷಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆ ಸೇರಿದ್ದಾರೆ. ಇವರಲ್ಲಿ 18 ಸಾವಿರ ಮಂದಿ ಐಸಿಯುನಲ್ಲಿದ್ದಾರೆ. ಪ್ರತಿ ದಿನ 500ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಬೂಸ್ಟರ್ ಡೋಸ್ ನೀಡಲು ಅಮೆರಿಕಾ ಚಿಂತನೆ ನಡೆಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ