ನವದೆಹಲಿ : ಭಾರತದಲ್ಲಿ ಕೊರೋನಾ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆ ಶುಕ್ರವಾರಕ್ಕೆ 5 ಲಕ್ಷ ಗಡಿ ದಾಟಿದೆ.
ಈ ಮೂಲಕ ಅಮೆರಿಕ, ಬ್ರೆಜಿಲ್ ಬಳಿಕ ಕೋವಿಡ್ ಸೋಂಕಿಗೆ ಅತಿ ಹೆಚ್ಚು ಜನರು ಮೃತಪಟ್ಟಮೂರನೇ ದೇಶವಾಗಿ ಭಾರತ ಮಾರ್ಪಟ್ಟಿದೆ. ಅಮೆರಿಕದಲ್ಲಿ ಈವರೆಗೆ 9.2 ಲಕ್ಷ ಮತ್ತು ಬ್ರೆಜಿಲ್‌ನಲ್ಲಿ 6.3 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಭಾರತದಲ್ಲಿ ಶುಕ್ರವಾರ 1072 ಸಾವು ವರದಿ ಆಗುವ ಮೂಲಕ ಒಟ್ಟು ಸಾವಿನ ಸಂಖ್ಯೆ 5,00,055ಕ್ಕೆ ಏರಿಕೆ ಆಗಿದೆ. ಭಾರತದಲ್ಲಿ ಮೊದಲ ಕೊರೋನಾ ಸಾವು 2020ರ ಮಾಚ್‌ರ್ 10ರಂದು ಕರ್ನಾಟಕದ ಕಲಬುರಗಿಯಲ್ಲಿ ಸಂಭವಿಸಿತ್ತು.
ಕಳೆದ ಜು.1ರಂದು ಸಾವಿಗೀಡಾದವರ ಸಂಖ್ಯೆ 4 ಲಕ್ಷ ಗಡಿ ದಾಟಿತ್ತು. ಅನಂತರ 217 ದಿನಗಳ ಬಳಿಕ 4ರಿಂದ 5 ಲಕ್ಷ ಗಡಿ ದಾಟಿದೆ.
ಕಳೆದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕೊರೊನಾ 2ನೇ ಅಲೆಗೆ ಭಾರತ ತತ್ತರಿಸಿತ್ತು. ಸಾವಿನ ಪ್ರಮಾಣ ಕಳೆದ ಮೇ 23ರಂದು 3 ಲಕ್ಷ ಗಡಿದಾಟಿತ್ತು. ಮತ್ತು ಏ.27ರಂದು 2 ಲಕ್ಷ ಗಡಿ ದಾಟಿತ್ತು. ಇದಕ್ಕೆ ಹೋಲಿಸಿದರೆ 4ರಿಂದ 5 ಲಕ್ಷಕ್ಕೆ ತಲುಪಲು ಅತ್ಯಂತ ಸುದೀರ್ಘ ಕಾಲ ಹಿಡಿದಿದೆ.