ಭಾರತದಲ್ಲಿ ಕೊರೊನಾ ಅಬ್ಬರ!

ಬುಧವಾರ, 5 ಜನವರಿ 2022 (08:40 IST)
ದೇಶದಲ್ಲಿ ಕೊರೊನಾ ವೈರಸ್ ವಿಜೃಂಭಿಸುತ್ತಿದೆ. ಸತತ ಎರಡನೇ ದಿನವೂ 30 ಸಾವಿರಕ್ಕೂ ಹೆಚ್ಚು ಕೇಸ್ ವರದಿ ಆಗಿವೆ.
 
ನಿನ್ನೆ 11.54 ಲಕ್ಷ ಟೆಸ್ಟ್ ನಡೆಸಿದ್ರೆ ಇಂದು 37,379 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.71 ಲಕ್ಷ ದಾಟಿದೆ.

ಆದ್ರೆ ಶೇಕಡಾ 90 ರಷ್ಟು ಮಂದಿಯಲ್ಲಿ ಸೋಂಕು ಲಕ್ಷಣ ಕಾಣಿಸಿಲ್ಲ ಎಂಬುದು ಗಮನಾರ್ಹ ವಿಚಾರ ಮತ್ತು ಸಮಾಧಾನದ ವಿಚಾರ ಅಂದ್ರೆ ಆಸ್ಪತ್ರೆಗೆ ದಾಖಲಾದ ಸೋಂಕಿತರ ಪೈಕಿ, ಕೇವಲ 0.5 ರಷ್ಟು ಮಂದಿಗೆ ಮಾತ್ರ ಆಕ್ಸಿಜನ್ ಸಪೋರ್ಟ್ ಬೇಕಾಗುತ್ತದೆ. ಆಸ್ಪತ್ರೆಗೆ ದಾಖಲಾದ ಸೋಂಕಿತರು ಮೂರು ದಿನಗಳಲ್ಲಿ ಡಿಸ್ಚಾರ್ಜ್ ಆಗುತ್ತಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕೇಂದ್ರ ಮಂತ್ರಿ ಮಹೇಂದ್ರನಾಥ್ ಪಾಂಡೇಗೆ ಸೋಂಕು ತಗುಲಿದೆ. ಛತ್ತೀಸ್ಘಡದಲ್ಲಿ ಕಾರ್ಯನಿರ್ವಹಿಸ್ತಿರುವ ಕೋಬ್ರಾ ಪಡೆ 36 ಯೋಧರಿಗೆ ಸೋಂಕು ತಗುಲಿದೆ. ಕೊರೊನಾದೊಂದಿಗೆ ದೇಶದಲ್ಲಿ ಒಮಿಕ್ರಾನ್ ಕೇಸ್ಗಳ ಸಂಖ್ಯೆ 2 ಸಾವಿರ ಗಡಿ ದಾಟಿದೆ.

  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ