ಈಗಾಗಲೇ ಡೆಲ್ಟಾ, ಡೆಲ್ಟಾಪ್ಲಸ್, ಓಮಿಕ್ರಾನ್ ತಳಿಗಳಾಗಿ ರೂಪ ಬದಲಿಸಿರುವ ಕೊರೊನಾ ಸೋಂಕು ಇದೀಗ ಮತ್ತೆ ಹೊಸ ರೂಪ ಬದಲಿಸಿದೆ.
ದೇಶ – ವಿದೇಶಗಳಲ್ಲಿ ಮತ್ತೆ ಕೊರೊನಾ ಸೋಂಕು ಆರ್ಭಟಿಸುತ್ತಿದ್ದು, ಕಳೆದ ಒಂದೇ ವಾರದಲ್ಲಿ ವಿವಿಧೆಡೆಯಿಂದ 11 ಮಿಲಿಯನ್ನಷ್ಟು ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.
ಇಸ್ರೇಲ್ನ ಆರೋಗ್ಯ ಸಚಿವಾಲಯವು ಎರಡು ಹೊಸ ಕೋವಿಡ್ ರೂಪಾಂತರ ಪ್ರಕರಣಗಳನ್ನು ದಾಖಲಿಸಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಇದರಿಂದ ಹೆಚ್ಚು ಆತಂಕ ಪಡುವ ಅವಶ್ಯಕತೆಯಿಲ್ಲವೆಂದೂ ಅವರು ಸಲಹೆ ನೀಡಿದ್ದಾರೆ.
ಕೋವಿಡ್-19 ರೂಪಾಂತರಿಯ ಓಮಿಕ್ರಾನ್ ಆವೃತ್ತಿಯ ಎರಡು ಉಪ-ವ್ಯತ್ಯಯಗಳನ್ನು ಸಂಯೋಜಿಸುವ ಈ ರೂಪಾಂತರಿಗಳನ್ನು ಸ್ಟ್ರೈನ್ ಬಿಎ-1 ಹಾಗೂ ಬಿಎ-2 ಎಂದು ಹೆಸರಿಸಲಾಗಿದೆ. ಇಸ್ರೇಲ್ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಇಬ್ಬರು ಪ್ರಯಾಣಿಕರ ಮೇಲೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಿದ ವೇಳೆ ರೊಪಾಂತರಿ ಪತ್ತೆಯಾಗಿದೆ.