ಕೊರೊನಾ ನಿರ್ಣಾಯಕ ಹಂತದಲ್ಲಿದೆ : WHO
ಕೊರೊನಾ ಸಾಂಕ್ರಾಮಿಕ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಅವಧಿಯಲ್ಲಿ ಸಾಂಕ್ರಾಮಿಕವನ್ನು ನಿಯಂತ್ರಿಸಲು ಅಗತ್ಯವಾದ ಎಲ್ಲಾ ಸಾಧನಗಳು ಇವೆ. ಸದ್ಯ ನಾವು ಸಾಂಕ್ರಾಮಿಕದ ನಿರ್ಣಾಯಕ ಹಂತದಲ್ಲಿದ್ದೇವೆ.
ಇದನ್ನು ಕೊನೆಗಾಣಿಸಲು ಎಲ್ಲಾ ರಾಷ್ಟ್ರಗಳು ಒಗ್ಗಟ್ಟಾಗಿ ಕೆಲಸ ಮಾಡುವ ಅಗತ್ಯತೆ ಇದೆ. ಭಯ ಮತ್ತು ನಿರ್ಲಕ್ಷ್ಯದ ನಡುವೆ ಕೊರೊನಾ ಸಾಂಕ್ರಾಮಿಕವನ್ನು ಬೆಳೆಯಲು ನಾವು ಬಿಡಬಾರದು ಎಂದು ಹೇಳಿದ್ದಾರೆ.