ಕೋವಿಡ್ ನಕಲಿ ಲಸಿಕೆ ವದಂತಿ: ಅಸಲಿ ಲಸಿಕೆಯನ್ನು ಪತ್ತೆ ಮಾಡುವ ವಿಧಾನ ಇಲ್ಲಿದೆ
ಸೋಮವಾರ, 6 ಸೆಪ್ಟಂಬರ್ 2021 (09:34 IST)
ಹೊಸದಿಲ್ಲಿ: ಭಾರತದಲ್ಲಿ ಕೋವಿಡ್ ನಕಲಿ ಲಸಿಕೆಗಳನ್ನು ನೀಡಲಾಗುತ್ತಿದೆ ಎಂಬ ವದಂತಿ ವ್ಯಾಪಕವಾಗಿ ಹರಡಿದೆ. ಹಾಗಾಗಿ,ಕೇಂದ್ರ ಸರ್ಕಾರ ನೈಜ ಲಸಿಕೆಗಳಿಗೆ ಇರುವ ವೈಶಿಷ್ಟ್ಯತೆಗಳನ್ನು ಪ್ರಕಟಿಸಿದ್ದು, ಇವು ನಕಲಿಗಳನ್ನು ತಡೆಯಲು ಸಹಕಾರಿಯಾಗಿವೆ.
ಕೊವಿಶೀಲ್ಡ್
*ಲಸಿಕೆ ಬಾಟಲಿ ಮೇಲಿನ ಲೇಬಲ್ ಗಾಢ ಹಸಿರು ಬಣ್ಣದ್ದಾಗಿರುತ್ತದೆ.
*ಬಾಟಲಿ ಮೇಲಿನ ಅಲ್ಯೂಮಿನಿಯಂ ಕ್ಯಾಪ್ನ ಫ್ಲಿಪ್ ಗಾಢ ಹಸಿರು ಬಣ್ಣದ್ದಾಗಿರುತ್ತದೆ.
*ವಿಶೇಷ ಬಿಳಿ ಬಣ್ಣದ ಶಾಯಿಯಿಂದ ಅಕ್ಷರಗಳನ್ನು ಪ್ರಿಂಟ್ ಮಾಡಲಾಗಿರುತ್ತದೆ.
*ಎಸ್ಐಐ ಲೋಗೋವನ್ನು ಸರಿಯಾದ ಕೋನದಲ್ಲಿ ಪ್ರಿಂಟ್ ಮಾಡಲಾಗಿದ್ದು, ಈ ಬಗ್ಗೆ ಖಚಿತ ಮಾಹಿತಿ ಇರುವವರು ಮಾತ್ರ ಇದನ್ನು ಗುರುತಿಸಬಲ್ಲರು.
*ಲೇಬಲ್ ಅನ್ನು ಒಂದು ಕೋನದಿಂದ ನೋಡಿದಾಗ ಅಕ್ಷರಗಳ ಬ್ಯಾಕ್ ಗ್ರೌಂಡ್ನಲ್ಲಿ ಜೇನುಗೂಡಿನ ಇಮೇಜ್ ಇರುವುದು ಕಾಣುತ್ತದೆ.
ಹೊಸ ವೀಸಾ ಪ್ರಕಟಿಸಿದ ಯುಎಇ ಕೊವ್ಯಾಕ್ಸಿನ್
*ಬಾಟಲಿಯ ಮೇಲೆ ಹೆಲಿಕ್ಸ್ ಮಾದರಿಯ ಲೋಗೋ ಇದ್ದು, ಅದು ಅಲ್ಟ್ರಾವಯಲೆಟ್ ಬೆಳಕಿನಲ್ಲಿ ಮಾತ್ರಕಾಣುತ್ತದೆ.
*ಲೇಬರ್ನಲ್ಲಿ ಗುಪ್ತವಾಗಿ ಚುಕ್ಕಿಗಳಿಂದ ಕೊವ್ಯಾಕ್ಸಿನ್ ಎಂಬ ಇಂಗ್ಲೀಷ್ ಪದವಿದೆ.
*ಕೊವ್ಯಾಕ್ಸಿನ್ ಎಂಬ ಅಕ್ಷರಗಳಿಗೆ ಹ್ಯಾಲೋಗ್ರಾಫಿಕ್ ಎಫೆಕ್ಟ್ ನೀಡಲಾಗಿದೆ. ಸ್ಪುತ್ನಿಕ್
*ಇವು ವಿದೇಶಗಳ ಎರಡು ಸಂಸ್ಥೆಗಳಿಂದ ಆಮದು ಮಾಡಿಕೊಂಡಿರುವುದರಿಂದ ಇವುಗಳ ಮೇಲೆ ಎರಡು ರೀತಿಯ ಲೇಬಲ್ಗಳನ್ನು ಕಾಣಬಹುದು. ಲೇಬಲ್ ಮೇಲಿನ ಮಾಹಿತಿ ಮತ್ತು ಅಕ್ಷರಗಳಲ್ಲಿ ವ್ಯತ್ಯಾಸವಿರುವುದಿಲ್ಲ. ಆದರೆ, ತಯಾರಕರ ಹೆಸರು ಮಾತ್ರ ಬೇರೆ ಇರುತ್ತದೆ.
*ಐದು ಲಸಿಕೆ ಬಾಟಲಿಗಳಿರುವ ಪ್ಯಾಕ್ ಆಗಿದ್ದರೆ, ಪ್ಯಾಕ್ನ ಮೇಲೆ ಮುಂದೆ ಹಾಗೂ ಹಿಂದೆ ಇಂಗ್ಲೀಷ್ ಲೇಬಲ್ ಇರುತ್ತದೆ. ಒಳಗಿರುವ ಲಸಿಕೆ ಬಾಟಲಿಯ ಮೇಲೆ ರಷ್ಯನ್ ಭಾಷೆಯ ಲೇಬಲ್ ಇರುತ್ತದೆ.