ಬೆಂಗಳೂರು : ಅಸೆಂಬ್ಲಿ ಎಲೆಕ್ಷನ್ಗೆ ಸರಿಯಾಗಿ ಇನ್ನೊಂದು ವರ್ಷ ಕೂಡ ಇಲ್ಲ. ಇಂತಹ ಹೊತ್ತಲ್ಲಿ ಮಂತ್ರಿ ಸ್ಥಾನಕ್ಕಾಗಿ ರಾಜ್ಯ ಬಿಜೆಪಿಯಲ್ಲಿ ಫೈಟಿಂಗ್ ಶುರುವಾಗಿದೆ.
ಪಂಚರಾಜ್ಯ ಚುನಾವಣೆಯಲ್ಲಿ ಬ್ಯುಸಿ ಇರುವ ಬಿಜೆಪಿ ಹೈಕಮಾಂಡ್ಗೆ ಸದ್ಯ ರಾಜ್ಯ ಬಿಜೆಪಿ ಬೆಳವಣಿಗೆ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತಿಲ್ಲ. ಹೀಗಾಗಿ ಸಂಪುಟ ವಿಸ್ತರಣೆಯೋ..? ಪುನಾರಚನೆಯೋ ವಿಳಂಬ ಆಗಿದೆ. ಆದರೆ ಇದನ್ನು ಸಹಿಸಿಕೊಳ್ಳೋಕೆ ಸಚಿವ ಸ್ಥಾನದ ಆಕಾಂಕ್ಷಿಗಳು ರೆಡಿ ಇಲ್ಲ.
ಕ್ಯಾಬಿನೆಟ್ಗೆ ಸರ್ಜರಿ ಈಗಲೇ ಆಗ್ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಇದಕ್ಕೆ ಸಂಬಂಧಿಸಿ ಪಕ್ಷದಲ್ಲಿ ಹತ್ತಾರು ಬೆಳವಣಿಗೆ ನಡೆದಿವೆ. ಭಿನ್ನಮತೀಯ ಚಟುವಟಿಕೆಗಳು ಶುರುವಾದಂತಿವೆ.
ಪರಸ್ಪರ ಕತ್ತಿ ಮಸೆಯುತ್ತಿದ್ದವರು ಈಗ ನಾನು-ನೀನು ಒಂದು ಎಂದು ಎಂಬ ರಾಗ ಹಾಡ್ತಾ ಇದ್ದಾರೆ. ಸಚಿವ ರೇಣುಕಾಚಾರ್ಯರ ಆಕ್ರೋಶದ ಕಟ್ಟೆ ಒಡೆದಿದೆ. ಪದೇ ಪದೇ ಅಧಿಕಾರ ಅನುಭವಿಸ್ತಿರೋ ಹಿರಿಯರ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದಾರೆ.