ರಾಜ್ಯ ಸಂಪುಟ ಸರ್ಜರಿ, ಬೇಡಿಕೆ ಏನಿದೆ?

ಶುಕ್ರವಾರ, 21 ಜನವರಿ 2022 (14:20 IST)
ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಮಾಸಾಂತ್ಯಕ್ಕೆ ಆರು ತಿಂಗಳು ಪೂರೈಸುತ್ತಿರುವ ಬೆನ್ನಲ್ಲೇ ಸಂಪುಟ ಸರ್ಜರಿಗೆ ಒತ್ತಡ ಹೆಚ್ಚುತ್ತಿದೆ.

ಮುಂದಿನ 15 ದಿನಗಳಲ್ಲಿ ಸಂಪುಟ ಪುನರ್ ರಚನೆಯಾಗದಿದ್ದರೆ ಇನ್ನೂ ಎರಡು ತಿಂಗಳ ಕಾಲ ನಡೆಯುವ ಸಾಧ್ಯತೆ ಕಡಿಮೆ. ಹಾಗಾಗಿ ಸಚಿವಾಕಾಂಕ್ಷಿಗಳು ತೆರೆಮರೆಯಲ್ಲೇ ಒತ್ತಡ ತಂತ್ರ ಮುಂದುವರಿಸಿದ್ದಾರೆ.

ಈವರೆಗೆ ಹೆಚ್ಚು ಬಾರಿ ಅಧಿಕಾರ ಅನುಭವಿಸಿದವರು, ಅವಕಾಶ ನೀಡಿದರೂ ಸಮರ್ಪಕವಾಗಿ ಕಾರ್ಯ ನಿರ್ವಹಿಸದವರು, ಮಹತ್ವದ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸದೆ ವಿವಾದಕ್ಕೆ ಸಿಲುಕಿದವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರು, ಸಮರ್ಥರು, ಅನುಭವಿಗಳು, ಪಕ್ಷ ಹಾಗೂ ಸರಕಾರದ ವರ್ಚಸ್ಸು ಹೆಚ್ಚಿಸುವಂತಹ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಬೇಕೆಂಬುದು ಸಚಿವಾಕಾಂಕ್ಷಿಗಳ ಒತ್ತಾಯ.

ಅಂದರೆ ಬಿಜೆಪಿ ಸರಕಾರವಿದ್ದ 2006, 2008, 2019ರಲ್ಲಿ ಸಚಿವರಾದವರು ಹಾಗೂ ಎರಡು ಬಾರಿಯಾದರೂ ಸಚಿವರಾದವರನ್ನು ಸಂಘಟನೆಗೆ ತೊಡಗಿಸಿಕೊಳ್ಳಬೇಕು. ಅವರ ಅನುಭವ, ಸಂಘಟನಾ ಕೌಶಲ್ಯವನ್ನು ಬಳಸಿಕೊಂಡು ಪಕ್ಷವನ್ನು ಇನ್ನಷ್ಟು ಬಲಪಡಿಸುವ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂಬುದು ಅವರ ಆಶಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ