ಬೂಸ್ಟರ್ ಡೋಸ್ ನಡುವಿನ ಅಂತರ ಇಳಿಕೆ

ಗುರುವಾರ, 7 ಜುಲೈ 2022 (07:06 IST)
ನವದೆಹಲಿ: ಕೋವಿಡ್-19 ಎರಡನೇ ಲಸಿಕೆ ಹಾಗೂ ಬೂಸ್ಟರ್ ಡೋಸ್ ನಡುವಿನ ಅಂತರವನ್ನು 9 ರಿಂದ 6 ತಿಂಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಇಳಿಕೆ ಮಾಡಿದೆ.

ರಾಷ್ಟ್ರೀಯ ತಾಂತ್ರಿಕ ಸಲಹಾ ಸಮೂಹ ಸ್ಥಾಯಿ ತಾಂತ್ರಿಕ ಉಪ ಸಮಿತಿ (ಎನ್ಟಿಜಿಐ) ಕೋವಿಡ್-19 ಎರಡನೇ ಲಸಿಕೆ ಮತ್ತು ಬೂಸ್ಟರ್ ಡೋಸ್ಗಳ ನಡುವಿನ ಅಂತರವನ್ನು ಆರು ತಿಂಗಳಿಗೆ ಇಳಿಸುವಂತೆ ಕಳೆದ ತಿಂಗಳು ಶಿಫಾರಸ್ಸು ಮಾಡಿತ್ತು.

ಬಳಿಕ ಇದೀಗ ಎನ್ಟಿಜಿಐ ಶಿಫಾರಸ್ಸಿಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. 

ಈ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರದ ಮೂಲಕ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಬೂಸ್ಟರ್ ಡೋಸ್ ಲಸಿಕೆ ಪಡೆಯುವ ಅವದಿಯನ್ನು 9 ರಿಂದ 6 ತಿಂಗಳಿಗೆ ಇಳಿಕೆ ಮಾಡಲಾಗಿದೆ.

18-59 ವರ್ಷ ವಯಸ್ಸಿನ ಎಲ್ಲಾ ಫಲಾನುಭವಿಗಳು ಎರಡನೇ ಡೋಸ್ ಪಡೆದ ಬಳಿಕ ಬೂಸ್ಟರ್ ಡೋಸ್ ಆರು ತಿಂಗಳು ಅಥವಾ 26 ವಾರ ಕಳೆದ ನಂತರ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಪಡೆಯಲು ಅರ್ಹರು ಎಂದರು. 

ಇದೀಗ 18-59 ವರ್ಷದೊಳಗಿನವರು ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ತೆಗೆದುಕೊಳ್ಳಬಹುದಾಗಿದೆ. ಖಾಸಗಿ ಲಸಿಕಾ ಕೇಂದ್ರಗಳಲ್ಲಿ ನಿಗದಿತ ಹಣವನ್ನು ಪಾವತಿಸಿ ಲಸಿಕೆ ಪಡೆಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ