ಅರ್ಧ ಬೆಂಗಳೂರಿಗೆ ಇಂದು ನೀರಿನ ಪೂರೈಕೆಯಲ್ಲಿ ವ್ಯತ್ಯಯ?

ಬುಧವಾರ, 13 ಸೆಪ್ಟಂಬರ್ 2023 (07:55 IST)
ಬೆಂಗಳೂರು: ನಗರದ ಚಂದ್ರಾ ಬಡಾವಣೆಯ ಜಲಗಾರಕ, ನೀರು ಪೂರೈಕೆಯ ಮಾರ್ಗದ ಪೈಪ್ ವಾಲ್ಟ್ ದುರಸ್ತಿ ಕಾಮಗಾರಿ ಹಿನ್ನೆಲೆ ಸಿಲಿಕಾನ್ ಸಿಟಿಯ ಹಲವೆಡೆ ಇಂದು (ಬುಧವಾರ) ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಕಾವೇರಿ 4ನೇ ಹಂತದ 1ನೇ ಫೇಸ್ನ ಮೂರು ಪಂಪ್ಗಳನ್ನು ಸ್ಥಗಿತಗೊಳಿಸಿ ದುರಸ್ತಿ ಕೆಲಸ ಮಾಡುವುದರಿಂದ ಬೆಂಗಳೂರು ನಗರದ ಬಹುತೇಕ ಕಡೆ ಇಂದು ನೀರು ಇರುವುದಿಲ್ಲ.

ಮಹಾಲಕ್ಷ್ಮಿ ಲೇಔಟ್ ಸುತ್ತಮುತ್ತ, ರಾಜಾಜಿನಗರ ಸುತ್ತ, ಜೆ.ಸಿ ನಗರ ಸುತ್ತಮುತ್ತ, ಡಾ.ರಾಜ್ಕುಮಾರ್ ರೋಡ್, ಯಶವಂತಪುರ, ಎಪಿಎಂಸಿ, ಆರ್ಎಂಸಿ ಯಾರ್ಡ್, ಗೊರಗುಂಟೆಪಾಳ್ಯ, ನಂಜಪ್ಪ ಲೇಔಟ್, ದಾಸರಹಳ್ಳಿ ಸೇರಿದಂತೆ ಅರ್ಧ ಬೆಂಗಳೂರಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ