ನಾಲಿಗೆ ತುದಿಯಲ್ಲಿಯೇ ಕೋಮುವಾದ ಬೆಳೆಸಿದ ಬಿಜೆಪಿ ಕೈಯಲ್ಲಿ ರಾಜ್ಯ ಕೊಡಬೇಡಿ - ನಟ ಪ್ರಕಾಶ್ ರೈ ಮನವಿ

ಬುಧವಾರ, 9 ಮೇ 2018 (14:18 IST)
ಮೈಸೂರು : ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಬಹುಭಾಷಾ ನಟ ಪ್ರಕಾಶ್ ರೈ ಅವರು ‘ನಾಲಿಗೆ ತುದಿಯಲ್ಲಿಯೇ ಕೋಮುವಾದ ಬೆಳೆಸಿದ ಬಿಜೆಪಿ ಕೈಯಲ್ಲಿ ರಾಜ್ಯ ಕೊಡಬೇಡಿ’ ಎಂದು ಮನವಿ ಮಾಡಿದ್ದಾರೆ.


ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,’ ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ, ನೆಮ್ಮದಿಯಾಗಿ ಆಡಳಿತ ನಡೆಸಲು ಬಿಡದೆ ಅವರ ಪರವಾಗಿ ರೆಡ್ಡಿ ಬ್ರದರ್ಸ್ ಅಧಿಕಾರದ ಚುಕ್ಕಾಣಿ ಹಿಡಿಯುವರು’ ಎಂದು ತಿಳಿಸಿದ್ದಾರೆ.


ಬಿಜೆಪಿಯೊಂದಿಗೆ ಸಾಂಗತ್ಯ ಬೆಳೆಸುವುದಿಲ್ಲವೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆಯೇ ಹೊರತು, ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಸಿಎಂ ಕುಮಾರಸ್ವಾಮಿ ಎಲ್ಲಿಯೂ ಸ್ಪಷ್ಟವಾಗಿ ಘೋಷಿಸಿಲ್ಲ. ಈಗಾಗಲೇ ಸಮ್ಮಿಶ್ರ ಸರ್ಕಾರವನ್ನು ಒಮ್ಮೆ ನೋಡಿದ್ದೇವೆ. ಮತ್ತೆ ಸಂಗೀತ ಕುರ್ಚಿ ರೀತಿಯ ಸರ್ಕಾರ ರಾಜ್ಯಕ್ಕೆ ಬೇಕಿಲ್ಲ. ಕಳೆದ ನಾಲ್ಕು ವರ್ಷದಿಂದ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶದಲ್ಲಿ ನಡೆದ ಆಳ್ವಿಕೆಯಲ್ಲಿ ಮಹಿಳೆಯರು ಸೇರಿದಂತೆ ಯಾರಿಗೂ ರಕ್ಷಣೆ ಇಲ್ಲದಾಗಿದೆ. ನಾನು ಬಿಜೆಪಿ ವಿರೋಧಿ. ಆದರೆ ಯಾವ ಪಕ್ಷದ ಪರವಾಗಿಯೂ ಇಲ್ಲ. ಅಭಿವೃದ್ಧಿಯ ಮಾತು ಬಿಟ್ಟು ಕೇವಲ ಅವಾಚ್ಯ ಪದಗಳಲ್ಲಿ ವೈಯುಕ್ತಿಕ ನಿಂದನೆಗೆ ಇಳಿದಿರುವ ಮೋದಿಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಿದೆ. ಏಕಧರ್ಮೋಪಾಸನೆ ದೇಶಕ್ಕೆ ಒಳ್ಳೆಯದಲ್ಲ’ ಎಂದು ಹೇಳಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ